ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು ಚಿತ್ರ ಪ್ರದರ್ಶನಕ್ಕೆ ಸ್ವಾಗತ

PHOTO • P. Sainath
PHOTO • P. Sainath
PHOTO • P. Sainath
PHOTO • P. Sainath

ಈ ದೃಶ್ಯ ಪ್ರಯಾಣದಲ್ಲಿ, ಓದುಗರು ಸಂಪೂರ್ಣ ಚಿತ್ರ ಪ್ರದರ್ಶನವನ್ನು ವೀಕ್ಷಿಸಬಹುದು, ಇದು ದೇಶದ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ರೀತಿಯ ಕೆಲಸಗಳ ನೈಜ ಚಿತ್ರಗಳನ್ನು ತೋರಿಸುತ್ತದೆ. ಈ ಎಲ್ಲಾ ಚಿತ್ರಗಳನ್ನು ಪಿ ಸಾಯಿನಾಥ್ ಅವರು 1993ರಿಂದ 2002ರವರೆಗೆ ಭಾರತದ ಹತ್ತು ರಾಜ್ಯಗಳಲ್ಲಿ ಸುತ್ತಾಡಿ ಸೆರೆಹಿಡಿದಿದ್ದಾರೆ. ಈ ಚಿತ್ರಗಳು ಆರ್ಥಿಕ ಸುಧಾರಣೆಗಳ ಮೊದಲ ದಶಕದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾಗುವ ಎರಡು ವರ್ಷಗಳ ಹಿಂದಿನವು.

ಈ ಪ್ರದರ್ಶನದಲ್ಲಿ ಸೇರಿಸಲಾಗಿರುವ ನಾಲ್ಕು ಸೆಟ್‌ಗಳ ಛಾಯಾಚಿತ್ರಗಳನ್ನು ಭಾರತದಲ್ಲಿ 2002ರಿಂದ 700,000ಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಚಿತ್ರಗಳನ್ನು ಬಸ್ಸುಗಳು ಮತ್ತು ರೈಲು ನಿಲ್ದಾಣಗಳು, ಕಾರ್ಖಾನೆ ಗೇಟ್‌ಗಳು, ಕೃಷಿ ಮತ್ತು ಇತರ ಕಾರ್ಮಿಕರ ದೊಡ್ಡ ರ‍್ಯಾಲಿಗಳು, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ತೋರಿಸಲಾಗಿದೆ. ಈಗ ಈ ವೆಬ್‌ಸೈಟ್‌ ಮೂಲಕ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ನಿಮ್ಮೆದುರಿಗಿಡಲಾಗುತ್ತಿದೆ.

'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಬಹುಶಃ ಮೊದಲ, ಸಂಪೂರ್ಣ ಡಿಜಿಟೈಸ್ಡ್ ಮತ್ತು ಕ್ಯೂರೇಟೆಡ್ ಆನ್‌ಲೈನ್ ಫೋಟೋ ಪ್ರದರ್ಶನವಾಗಿದ್ದು, ಇದನು ಭೌತಿಕ ಪ್ರದರ್ಶನಗಳೊಂದಿಗೆ (ಕೆಲವು ಪಠ್ಯ ಮತ್ತು ದೊಡ್ಡ ಚಿತ್ರಗಳನ್ನು ಒಳಗೊಂಡಂತೆ) ಸಂಯೋಜಿಸಲಾಗಿದೆ ಮತ್ತು ಆನ್‌ಲೈನ್‌ನಲ್ಲಿ ಸೃಜನಶೀಲತೆಯೊಂದಿಗೆ ಪರಿಚಯಿಸಲಾಗಿದೆ. ಪ್ರತಿ ಪ್ಯಾನೆಲ್‌ನಲ್ಲಿ ಸರಾಸರಿ 2ರಿಂದ 3 ನಿಮಿಷಗಳ ವೀಡಿಯೊವನ್ನು ಸಹ ಸೇರಿಸಲಾಗಿದೆ. ಪ್ರದರ್ಶನದ ಕೊನೆಯ ಪ್ಯಾನೆಲ್ 7 ನಿಮಿಷಗಳ ವೀಡಿಯೊವನ್ನು ಒಳಗೊಂಡಿದೆ.

ಈ ಪ್ರದರ್ಶನದಲ್ಲಿ ನೀವು, ಎಂದರೆ ಓದುಗ-ವೀಕ್ಷಕರು, ವೀಡಿಯೊವನ್ನು ವೀಕ್ಷಿಸುತ್ತಾ ಛಾಯಾಗ್ರಾಹಕರ ಕಾಮೆಂಟರಿಯನ್ನು ಆಲಿಸಬಹುದು, ಫೋಟೋದೊಂದಿಗೆ ಪಠ್ಯವನ್ನು ಓದಬಹುದು ಮತ್ತು ಪ್ರತಿಯೊಂದು ಸ್ಟಿಲ್-ಫೋಟೋವನ್ನು ಹೆಚ್ಚಿನ ರೆಸಲ್ಯೂಶನ್‌ನಲ್ಲಿ ವೀಕ್ಷಿಸಬಹುದು.

ನೀವು ಆಯಾ ಪುಟದ ವೀಡಿಯೋ ನೋಡಿದ ನಂತರ ಕೆಳಗೆ ಸ್ಕ್ರಾಲ್‌ ಮಾಡಬಹುದು. ಪ್ರತಿ ಪುಟದಲ್ಲೂ ವೀಡಿಯೊದ ಕೆಳಗೆ, ಆಯಾ ಪ್ಯಾನೆಲ್‌ನ ಮೂಲ ಫೋಟೊಗಳು ಮತ್ತು ಅವುಗಳ ಪಠ್ಯವನ್ನು ಕಾಣಬಹುದು.

ನೀವು ಬಯಸಿದಲ್ಲಿ ಕೆಳಗಿನ ಒಂದೊಂದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಒಂದೇ ಬಾರಿಗೆ ಒಂದು ಪ್ಯಾನೆಲ್ ವೀಕ್ಷಿಸಬಹುದು.ಈ ರೀತಿಯಲ್ಲಿ ನೀವು ಬಯಸಿದ ಆಸಕ್ತಿಗೆ ಹೊಂದುವ ಚಿತ್ರಗಳನ್ನೇ ನೋಡಬಹುದು. ಆದರೆ ನೀವು ಬಯಸಿದರೆ ಇಡೀ ಪ್ರದರ್ಶನವನ್ನು ಒಂದು ನಿರಂತರ ವೀಡಿಯೊದಲ್ಲಿ ನೋಡಬಹುದು - ಕೆಳಗಿನ ಸರಣಿಯ ಕೊನೆಯ ಲಿಂಕ್ ನಲ್ಲಿ ಇದನ್ನು ಕಾಣಬಹುದು.

PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath
PHOTO • P. Sainath

ಅಥವಾ ಒಂದೇ ಬಾರಿಗೆ ಇಡೀ ಪ್ರದರ್ಶನವನ್ನು ನೋಡಬಹುದು (ಇದು 32 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನೀವಿಲ್ಲಿ ಇಡೀ ಪ್ರದರ್ಶನವನ್ನು ಒಂದೊಂದಾಗಿ ಪ್ಯಾನಲ್‌ಗಳ ಮೂಲಕ ನೋಡಬಹುದು). ಪಠ್ಯವನ್ನು ಓದಲು, ನೀವು ಆಯಾ ಪ್ಯಾನಲ್‌ನ ಪುಟಗಳಿಗೆ ಹೋಗಬೇಕಾಗುತ್ತದೆ. ಆದರೆ ನೀವು 32 ನಿಮಿಷಗಳ ಪ್ರದರ್ಶನ ನೋಡಬಯಸಿದರೆ ಲಿಂಕ್ ಇಲ್ಲಿದೆ:

ಅನುವಾದ : ಶಂಕರ . ಎನ್ . ಕೆಂಚನೂರು

P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru