ಅವರು ಸಾವಿರಾರು ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅವರು ಪ್ರತಿದಿನ, ಕಾಲ್ನಡಿಗೆಯಲ್ಲಿ, ಬೈಸಿಕಲ್ಗಳಲ್ಲಿ, ಟ್ರಕ್ಗಳಲ್ಲಿ, ಬಸ್ಗಳಲ್ಲಿ, ಅಥವಾ ಅವರಿಗೆ ಸಿಗುವ ಯಾವುದೇ ವಾಹನಗಳ ಒಳಗೆ ಅಥವಾ ಅದರ ಮೇಲೆ ಕುಳಿತು ಬರುತ್ತಿದ್ದಾರೆ. ಆಯಾಸ, ದಣಿವು ಹಾಗು ಮನೆಯನ್ನು ತಲುಪುವ ನಿರೀಕ್ಷೆಯಲ್ಲಿ ಎಲ್ಲಾ ವಯಸ್ಸಿನ ಪುರುಷರು, ಮಹಿಳೆಯರು ಮತ್ತು ಅನೇಕ ಮಕ್ಕಳು ಸಹ ಕಾತರಿಸುತ್ತಿದ್ದಾರೆ
ಈ ಜನರು ಹೈದರಾಬಾದ್ ಮತ್ತು ಅದರಾಚೆಯಿಂದ, ಮುಂಬೈ ಮತ್ತು ಗುಜರಾತ್ನಿಂದ, ವಿದರ್ಭದಾದ್ಯಂತ ಮತ್ತು ಪಶ್ಚಿಮ ಮಹಾರಾಷ್ಟ್ರದಿಂದ, ಉತ್ತರ ಅಥವಾ ಪೂರ್ವದಿಂದ - ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕಡೆಗೆ ನಡೆಯುತ್ತಿದ್ದಾರೆ.
ಲಾಕ್ಡೌನ್ ಹೊಡೆತದಿಂದಾಗಿ ದೇಶದಾದ್ಯಂತ ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತಗೊಂಡಿದೆ, ಜೀವನೋಪಾಯಗಳು ಸ್ಥಗಿತಗೊಂಡಿವೆ ಇಂತಹ ಸಂದರ್ಭಲ್ಲಿ ಅವರ ಆಸೆ ಕೇವಲ ಒಂದೇ: ಅವರ ಹಳ್ಳಿಗಳಿಗೆ, ಅವರ ಕುಟುಂಬಗಳಿಗೆ ಮತ್ತು ಅವರ ಪ್ರೀತಿಪಾತ್ರರ ಬಳಿ ಹಿಂತಿರುಗುವುದು. ಪ್ರಯಾಣ ಎಷ್ಟೇ ಕಠಿಣವಾಗಿದ್ದರೂ ಅವರಿಗೆ ಈ ಮಾರ್ಗವೇ ಉತ್ತಮವೆನಿಸಿದೆ.
ಅವರಲ್ಲಿ ಹಲವರು ದೇಶದ ಭೌಗೋಳಿಕ ಕೇಂದ್ರವಾಗಿರುವ ಹಾಗು ಸಾಮಾನ್ಯ ಸಮಯದಲ್ಲಿ ದೇಶದ ಪ್ರಮುಖ ರೈಲು ಜಂಕ್ಷನ್ ಆಗಿರುವ ನಾಗ್ಪುರದ ಮೂಲಕ ಹೋಗುತ್ತಿದ್ದಾರೆ. ಈ ಪ್ರಯತ್ನಗಳು ಮೇ ತಿಂಗಳಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೆಲವು ವಲಸಿಗರನ್ನು ಬಸ್ಗಳು ಮತ್ತು ರೈಲುಗಳಲ್ಲಿ ಸಾಗಿಸಲು ಪ್ರಾರಂಭಿಸುವ ತನಕ ಮುಂದುವರಿಸಿದರು, ಆದರೆ ಸೀಟು ಸಿಗದ ಸಾವಿರಾರು ಜನರು ತಮ್ಮ ದೂರದ ಊರಿಗೆ ಪ್ರಯಾಣಿಸುವ ಪ್ರಯತ್ನದಲ್ಲಿ ತಮಗೆ ಕಂಡ ಎಲ್ಲಾ ರೀತಿಯಲ್ಲೂ ಮುಂದುವರಿಸಿದರು.

ತಂದೆಯು ತಮ್ಮ ಸಾಮಾನುಗಳನ್ನು ಹೆಗಲ ಮೇಲೆ ಹೊತ್ತುಕೊಂಡರೆ, ಯುವ ತಾಯಿಯು ತಮ್ಮ ನಿದ್ದೆಯಲ್ಲಿರುವ ಮಗುವನ್ನು ಭುಜದ ಮೇಲೆ ಹೊತ್ತುಕೊಂಡು ವೇಗವಾಗಿ ನಡೆಯುತ್ತಾಳೆ, ಈ ಕುಟುಂಬವು ಹೈದರಾಬಾದ್ನಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದಾರೆ
ಅವರಲ್ಲಿ: ಯುವ ದಂಪತಿಗಳು ತಮ್ಮ 44 ದಿನದ ಹೆಣ್ಣು ಮಗುವಿನೊಂದಿಗೆ ಹೈದರಾಬಾದ್ನಿಂದ ಗೋರಖ್ಪುರಕ್ಕೆ ಬಾಡಿಗೆ ಮೋಟಾರು ಬೈಕಿನಲ್ಲಿ, 40 ಡಿಗ್ರಿ ಮುಟ್ಟುವ ತಾಪಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ
ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆಯಲು ಅಹಮದಾಬಾದ್ಗೆ ಹೋಗಿದ್ದ ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯ ವಿವಿಧ ಹಳ್ಳಿಗಳ ಮೂವತ್ನಾಲ್ಕು ಯುವತಿಯರು, ತಮ್ಮ ಮನೆಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದರು.
ಐವರು ಯುವಕರು, ಇತ್ತೀಚೆಗಷ್ಟೇ ಖರೀದಿಸಿದ್ದ ತಮ್ಮ ಸೈಕಲ್ನಲ್ಲಿ ಒಡಿಶಾ ರಾಜ್ಯದ ರಾಯಗಡ ಜಿಲ್ಲೆಗೆ ಹೊರಟಿದ್ದರು.
ನಾಗ್ಪುರದ ಹೊರ ವರ್ತುಲ ರಸ್ತೆಯಲ್ಲಿ, ಪ್ರತಿ ದಿನ ನೂರಾರು ವಲಸಿಗರು ರಾಷ್ಟ್ರೀಯ ಹೆದ್ದಾರಿ 6 ಮತ್ತು 7ರಿಂದ ಈಗಲೂ ಆಗಮಿಸುತಿದ್ದಾರೆ. ಅವರಿಗೆ ಹಲವಾರು ಸ್ಥಳಗಳಲ್ಲಿ ಆಹಾರಾದ ವ್ಯವಸ್ಥೆ ಮಾಡಲಾಗಿತ್ತು. ಮತ್ತು ಜಿಲ್ಲಾಡಳಿತ ಮತ್ತು ಎನ್ಜಿಒಗಳು ಮತ್ತು ನಾಗರಿಕರ ಗುಂಪುಗಳ ಒಕ್ಕೂಟದಿಂದ ಆಯೋಜಿಸಲಾದ ಟೋಲ್ ಪ್ಲಾಜಾದ ಸುತ್ತಲೂ ಆಶ್ರಯವನ್ನು ಒದಗಿಸಲಾಗಿತ್ತು. ಕಾರ್ಮಿಕರು ಸುಡುವ ಬೇಸಿಗೆಯಲ್ಲಿ ದಿನದಂದು ವಿಶ್ರಾಂತಿ ಪಡೆಯುತ್ತಿದ್ದು ಮತ್ತು ಸಂಜೆಯ ವೇಳೆಗೆ ತಮ್ಮ ಪ್ರಯಾಣವನ್ನು ಪುನರಾರಂಭಿಸುತ್ತಿದ್ದರು. ಮಹಾರಾಷ್ಟ್ರ ಸರ್ಕಾರವು ಈಗ ಅವರನ್ನು ಪ್ರತಿದಿನ ವಿವಿಧ ರಾಜ್ಯಗಳ ಗಡಿಯಲ್ಲಿ ಬಿಡಲು ಬಸ್ಗಳನ್ನು ವ್ಯವಸ್ಥೆ ಮಾಡಿದೆ. ಆದ್ದರಿಂದ ಆ ಜನಸಂದಣಿಯು ಈಗ ನಿಧಾನವಾಗಿ ಕಮ್ಮಿಯಾಗುತ್ತಿದೆ ಮತ್ತು ಜನರು ಮನೆಗಳನ್ನು ಸುರಕ್ಷಿತವಾಗಿ ತಲುಪಬಹುದು - ಕೇವಲ ಇದನ್ನು ಮಾತ್ರವೇ ಅವರು ಬಯಸಿದ್ದು.

ಹೈದರಾಬಾದ್ ನಿಂದ ಟ್ರಕ್ ನಲ್ಲಿ ಬಂದಿಳಿದ ಕಾರ್ಮಿಕರು ನಂತರ ಅಲ್ಲಿಂದ ಅವರು ನಾಗ್ಪುರದ ಹೊರವಲಯದಲ್ಲಿರುವ ಆಹಾರ ಆಶ್ರಯಕ್ಕೆ ತೆರಳುತ್ತಿರುವುದು

ವಲಸಿಗರ ಗುಂಪು ತಮ್ಮ ಸಾಮಾನುಗಳನ್ನು ಹೊತ್ತು ಮನೆಗಳಿಗೆ ಹಿಂತಿರುಗುತ್ತಿರುವುದು - ಉರಿಯುತ್ತಿರುವ ಮೇ ತಿಂಗಳ ಬಿಸಿಲಿನಲ್ಲಿ ಕೇಜಿಗಟ್ಟಲೆ ಸಾಮಾನುಗಳನ್ನು ತಲೇಮೇಲೆ ಹೊತ್ತು ಹಲವು ಕಿಲೋಮೀಟರ್ ಗಳಷ್ಟು ದೂರ ಸಾಗಿದರು. ಲಾಕ್ ಡೌನ್ ಘೋಷಿಸಿದ ನಂತರ, ಪ್ರತಿದಿನ ಗುಂಪುಗಳಲ್ಲಿ ನಿರಂತರವಾಗಿ ನಡೆದ ಈ ಜನರ ಪ್ರಯಾಣಕ್ಕೆ ನಾಗ್ಪುರವು ಸಾಕ್ಷಿಯಾಯಿತು - ಅವರ ಮನೆಯ ಕಡೆಗೆ ಸಾಗಲು ತೋಚಿದ ಎಲ್ಲಾ ದಿಕ್ಕಿನಲ್ಲಿಯೂ ಸಾಗುತ್ತಿದ್ದರು

ನಾಗ್ಪುರದ ಹೊರವಲಯದಲ್ಲಿರುವ ಪಂಜಾರಿ ಬಳಿಯ ಆಹಾರ ಆಶ್ರಯದ ಕಡೆಗೆ ನಡೆಯುತ್ತಿದ್ದ ಯುವಕರ ಗುಂಪು; ಅವರು ಕೆಲಸಕ್ಕಾಗಿ ಹೈದರಾಬಾದ್ ನಿಂದ ವಲಸೆ ಬಂದಿದ್ದರು

ನಾಗ್ಪುರ ನಗರದ ಹೊರವಲಯದಲ್ಲಿರುವ ಪಂಜಾರಿ ಗ್ರಾಮಕ್ಕೆ ಪ್ರತಿದಿನ ಅಸಂಖ್ಯಾತ ವಲಸಿಗರು ಬಂದು ತದನಂತರ ಅಲ್ಲಿಂದ ದೇಶದ ವಿವಿಧ ಭಾಗಗಳಲ್ಲಿರುವ ತಮ್ಮ ದೂರದ ಹಳ್ಳಿಗಳಿಗೆ ತೆರಳುತ್ತಿರುವುದು

ನಾಗ್ಪುರ ನಗರದ ಸಮೀಪವಿರುವ ಹೆದ್ದಾರಿಯಲ್ಲಿನ ಫ್ಲೈಓವರ್ ನ ನೆರಳಿನಲ್ಲಿ ಆಹಾರ ಮತ್ತು ನೀರಿಗಾಗಿ ಹೆಚ್ಚು ಅಗತ್ಯವಿರುವ ವಿರಾಮವನ್ನು ತೆಗೆದುಕೊಳ್ಳುತ್ತಿರುವುದು

ಟ್ರಕ್ ಒಂದು ವಿಶ್ರಾಂತಿಯ ನಂತರ ತನ್ನ ಪ್ರಯಾಣವನ್ನು ಪುನರಾರಂರಂಭ ಮಾಡುತ್ತಿರುವುದು, ದಣಿದ ವಲಸೆ ಕಾರ್ಮಿಕರಿಂದ ತುಂಬಿದ ಟ್ರಕ್, ತಮ್ಮ ಹಳ್ಳಿಗಳನ್ನು ಮತ್ತು ಕುಟುಂಬಗಳನ್ನು ತಲುಪಲು ಹತಾಶಯರಾಗಿರುವುದು

ಈ ಟ್ರಕ್ ನಲ್ಲಿ ಸ್ವಲ್ಪ ಜಾಗ ಕಂಡುಕೊಳ್ಳುವಲ್ಲಿ ಯಶಸ್ವಿಯಾದವರಿಗೆ ಮಾತ್ರ ಪ್ರಯಾಣವು ಪುನರಾರಂಭವಾಗುತ್ತಿತ್ತು

ಹಲವರು ತಮ್ಮ ಮುಂದಿನ ಪ್ರಯಾಣಕ್ಕಾಗಿ ಮತ್ತೊಂದು ಟ್ರಕ್ ಗೆ ಹೋಗಲು ಪ್ರಯತ್ನಿಸುತ್ತಿರುವುದು. ಇದು NH 6 ಮತ್ತು 7 ಗೆ ಸಂಪರ್ಕಿಸುವ ನಾಗ್ಪುರದ ಹೊರ ವರ್ತುಲ ರಸ್ತೆಯ ಟೋಲ್ ಪ್ಲಾಜಾದ ಬಳಿ

ಇದು ಬೇಸಿಗೆಯ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ

ಅವರ ಕುಟುಂಬಗಳನ್ನು ನೋಡುವ ಭರವಸೆಯು ಬಹುಶಃ ಶಾಖ ಮತ್ತು ಹಸಿವು, ಜನಸಂದಣಿ ಮತ್ತು ಬಳಲಿಕೆಯನ್ನು ಸ್ವಲ್ಪ ಹೆಚ್ಚು ಸಹಿಸಿಕೊಳ್ಳುವಂತೆ ಮಾಡಿತು

ಹೊಸದಾಗಿ ಖರೀದಿಸಿದ ಬೈಸಿಕಲ್ ಗಳಲ್ಲಿ ಮುಂಬೈನಿಂದ ಒಡಿಶಾಗೆ ಹೋಗುತ್ತಿರುವ ಮೂವರು ಪುರುಷರು, ಅವರಿಗೆ ಬೇರೇ ದಾರಿಯೇ ಇಲ್ಲದ ಕಾರಣ ಪ್ರಯಾಸಕರ ಪ್ರಯಾಣವನ್ನು ಕೈಗೊಳ್ಳಬೇಕಾಯಿತು ಎಂದು ಅವರು ಹೇಳಿದರು

ಸಾಮಾನ್ಯವಾಗಿ, ವಲಸಿಗರು ಹೆದ್ದಾರಿಗಳು ಅಥವಾ ಮುಖ್ಯ ರಸ್ತೆಗಳಲ್ಲಿ ನಡೆಯುವುದಿಲ್ಲ, ಅವರು ಹೊಲಗಳು ಮತ್ತು ಅರಣ್ಯ ಮಾರ್ಗಗಳ ಮೂಲಕ ನಡೆಯುತ್ತಾರೆ

ಬಿಕ್ಕಟ್ಟು
ಬಂದಾಗ,
ಅವರೇ
ನಿರ್ಮಿಸಿದ
ನಗರಗಳನ್ನು
ತೊರೆಯುವಾಗ,
ಅವು ಅವರಿಗೆ
ಸ್ವಲ್ಪ
ಬೆಂಬಲ
ಅಥವಾ
ಸೌಕರ್ಯವನ್ನು
ನೀಡಿತು
ಅನುವಾದ : ಏಕತ ಹರ್ತಿ ಎಚ್ ವೈ