ಪ್ರತಿದಿನ ಬೆಳಿಗ್ಗೆ ಹಿಮಾನ್ಷಿ ಕೂಬಾಲ್‌ ಪ್ಯಾಂಟ್‌ ಶರ್ಟ್‌ ತೊಟ್ಟು ಪತಿಯೊಡನೆ ತಮ್ಮ ಸಣ್ಣ ದೋಣಿಯೊಂದಿಗೆ ನೀರಿಗಿಳಿಯುತ್ತಾರೆ. ಮತ್ತೆ ಸಂಜೆಗೆ ಚಂದದ ಸೀರೆಯುಟ್ಟು, ಒಮ್ಮೊಮ್ಮೆ ಅಬ್ಬಲಿಗೆ (ಕನಕಾಂಬರ) ಹೂ ಮುಡಿದು ಗ್ರಾಹಕರಿಗೆ ಮೀನು ಕತ್ತರಿಸಿ ಕೊಡುವುದು, ಸ್ವಚ್ಛಗೊಳಿಸಿ ಕೊಡುವುದನ್ನು ಮಾಡುತ್ತಾರೆ.

ಈಗ ತನ್ನ ಮೂವತ್ತರ ಹರೆಯದಲ್ಲಿರುವ ಹಿಮಾನ್ಷಿ ತನ್ನ ಬಾಲ್ಯದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದರು. ಆರಂಭದಲ್ಲಿ ಮಾಲ್ವಾಣ್ ತಾಲ್ಲೂಕಿನ ನದಿಗಳು ಮತ್ತು ಕೊಲ್ಲಿಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಅವರು ಮೂರು ವರ್ಷಗಳ ಹಿಂದೆ ದೋಣಿ ಖರೀದಿಸಿದಾಗಿನಿಂದ, ತನ್ನ ಗಂಡನೊಂದಿಗೆ ಅರೇಬಿಯನ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಮಾಲ್ವಣ್‌ ದಾಂಡಿಯ ತೀರದಲ್ಲಿರುವ ಕೆಲವೇ ಕೆಲವು ಮಹಿಳಾ ಮೀನುಗಾರರಲ್ಲಿ ಅವರೂ ಒಬ್ಬರು, ಅವರು ಚುರುಕಾಗಿ ಬಲೆಗಳನ್ನು ಬೀಸಬಲ್ಲರು. ಮತ್ತು ಮೀನುಗಾರಿಕೆಯಲ್ಲಿ ನಿರತರಾಗಿರುವ ತಾಲ್ಲೂಕಿನ ಒಟ್ಟು 111,807 ಜನಸಂಖ್ಯೆಯ 10,635 ನಿವಾಸಿಗಳಲ್ಲಿ ಒಬ್ಬರಾಗಿದ್ದಾರೆ.

"ನಾನು ಮೊದಲು ನನ್ನ ಪತಿಯೊಂದಿಗೆ ಇತರ ದೋಣಿಗಳಲ್ಲಿ ಮೀನು ವಿಂಗಡಿಸುವ ಕೆಲಸ ಮಾಡುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ಕೊನೆಗೆ ಮೂರು ವರ್ಷಗಳ ಹಿಂದೆ, ನಮ್ಮದೇ ಆದ ಒಂದು ಸಣ್ಣ ದೋಣಿ ಖರೀದಿಸಲು ಸಾಕಾಗುವಷ್ಟು ಹಣ ಒಟ್ಟುಗೂಡಿಸಿದ್ದೆವು, ಅಂದಿನಿಂದ ನಾವು ಒಟ್ಟಿಗೆ ನಮ್ಮದೇ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದೇವೆ."

ಹತ್ತಿರದಲ್ಲಿ, "ತೀನ್‌ ಶೇ, ತೀನ್‌ ಶೇ ದಹ, ತೀನ್‌ ಶೇ ವೀಸ್! ( ಮುನ್ನೂರು, ಮುನ್ನೂರ ಹತ್ತು, ಮುನ್ನೂರು ಇಪ್ಪತ್ತು!)‌" ಎನ್ನುವ ಹರಾಜು ಕೂಗುವವರ ಸದ್ದು ಕೇಳುತ್ತಿತ್ತು. ಅನೇಕ ಮೀನುಗಾರರು ತಮ್ಮ ದೋಣಿಗಳಿಂದ ಮೀನು ತುಂಬಿದ ಕ್ರೇಟ್‌ಗಳನ್ನು ಬೀಚ್‌ಗೆ ಸಾಗಿಸುತ್ತಿದ್ದರು. ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಈ ಜನಸಂದಣಿಯಿಂದ ಉತ್ತಮ ವ್ಯಾಪಾರ ಗಳಿಸಲು ತಮ್ಮದೇ ತಂತ್ರಗಳನ್ನು ಬಳಸುತ್ತಾರೆ. ಬೀದಿ ನಾಯಿಗಳು, ಬೆಕ್ಕುಗಳು ಮತ್ತು ಪಕ್ಷಿಗಳು ಅತ್ತಿತ್ತ ಓಡಾಡುತ್ತಿದ್ದವು.

"ಸಾಮಾನ್ಯವಾಗಿ, ನಾವು ಪ್ರತಿದಿನ ಬೆಳಿಗ್ಗೆ ಮೀನು ಹಿಡಿಯಲು ಹೋಗುತ್ತೇವೆ. ಆದರೆ ಹವಾಮಾನವು ಪ್ರತಿಕೂಲವಾಗಿದ್ದರೆ ಅಥವಾ ಬೇರೆ ಯಾವುದಾದರೂ ಕಾರಣದಿಂದ ನೀರಿಗಿಳಿಯದಿದ್ದರೆ, ಮೀನುಗಳನ್ನು ಕತ್ತರಿಸಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮಾರುಕಟ್ಟೆಗೆ ಹೋಗುತ್ತೇವೆ. ಜೊತೆಗೆ ಪ್ರತಿದಿನ ಸಂಜೆ ಹರಾಜಿನಲ್ಲಿಯೂ ಭಾಗವಹಿಸುತ್ತೇವೆ.”

ಭಾರತದ ಹೆಚ್ಚಿನ ಭಾಗಗಳಲ್ಲಿ ಮೀನುಗಾರಿಕೆಯನ್ನು ಸಾಮಾನ್ಯವಾಗಿ ಪುರುಷರು ಮಾಡುತ್ತಾರೆ, ಹಿಮಾನ್ಷಿಯಂತಹ ಅನೇಕ ಮಹಿಳೆಯರು ಈ ವ್ಯವಹಾರದ ಇತರ ಅಂಶಗಳಾದ ಮೀನು ಸಂಸ್ಕರಣೆ ಮತ್ತು ಮಾರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇವರು ದೇಶದ ಒಟ್ಟು ಮೀನುಗಾರಿಕೆಯಲ್ಲಿನ ಮೀನುಗಾರಿಕೆ ನಂತರದ ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 66.7ರಷ್ಟಿದ್ದಾರೆ ಮತ್ತು ಇವರು ಈ ಉದ್ಯಮದ ಅವಿಭಾಜ್ಯ ಅಂಗವಾಗಿದ್ದಾರೆ. ಕೊನೆಯ ಸಾಗರ ಮೀನುಗಾರಿಕೆ ಗಣತಿಯ ಪ್ರಕಾರ (2010), ಮೀನು ಹಿಡಿಯುವ ನಂತರದ ಕೆಲಸ (ಮೀನು ಹಿಡಿಯುವ ಪ್ರಕ್ರಿಯೆಯನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಲ್ಲಿ) ಸುಮಾರು 4 ಲಕ್ಷ ಮಹಿಳೆಯರನ್ನು ಒಳಗೊಂಡಿದೆ. ಇದಲ್ಲದೆ, ಸುಮಾರು 40,000 ಮಹಿಳೆಯರು ಮೀನು ಸಾಕಣಿಕೆಗಾಗಿ 'ಮೀನು ಬೀಜಗಳನ್ನು' (ಅಥವಾ ಮೊಟ್ಟೆಗಳು) ಸಂಗ್ರಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

"ಇದು ಬಹಳ ಶ್ರಮದಾಯಕವಾದ ಕೆಲಸ, ಮೀನು ಖರೀದಿಸುವುದು, ಅವುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಾಟ ಮಾಡುವುದು, ಐಸ್‌ನಲ್ಲಿ ಇರಿಸುವುದು ಮತ್ತೆ ಅವುಗಳನ್ನು ಕತ್ತರಿಸಿ ಮಾರುವುದು. ಇಷ್ಟೂ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು" ಎನ್ನುತ್ತಾರೆ ಜುವಾನಿತಾ (ಪೂರ್ಣ ಹೆಸರು ತಿಳಿದಿಲ್ಲ). ವಿಧವೆಯಾಗಿರುವ ಇವರು ಮೀನು ವ್ಯಾಪಾರಿಯಾಗಿದ್ದು ದಾಂಡಿ ಕಡಲ ತೀರದಲ್ಲಿ ಒಂದು ಕೋಣೆಯ ಇಟ್ಟಿಗೆ, ಕಲ್ನಾರಿನಿಂದ ಕಟ್ಟಿದ ಮನೆಯೊಂದರಲ್ಲಿ ವಾಸಿಸುತ್ತಾರೆ. ಅವರ ಮನೆಗೆ ನಾವು ಹೋದಾಗ ಗೋಡೆಯಲ್ಲಿ ಹರಾಜಿನಲ್ಲಿ ಮೀನು ಖರೀದಿಸಿದ್ದಕ್ಕಾಗಿ ನೀಡಿದ್ದ ರಶಿದಿಗಳು ಮನೆಯ ಮೂಲೆಯೊಂದರಲ್ಲಿ ತಂತಿಯಲ್ಲಿ ನೇತಾಡುತ್ತಿದ್ದವು.
PHOTO • Manini Bansal

ʼಮೂರು ವರ್ಷಗಳ ಹಿಂದೆ ನಮ್ಮದೇ ದೋಣಿ ಖರೀದಿಸಲು ಹಣದ ಅನುಕೂಲವಾಯಿತು. ಅಂದಿನಿಂದ ನಾವಿಬ್ಬರು ಒಟ್ಟಿಗೆ ದೋಣಿಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೇವೆʼ ಎನ್ನುತ್ತಾರೆ ಹಿಮಾನ್ಷಿ ಕೂಬಾಲ್

ಜುವಾನಿತರಂತಹ ವ್ಯಾಪಾರಿಗಳಿಲ್ಲದೆ ಮೀನುಗಳ ಹರಾಜು ಪೂರ್ಣಗೊಳ್ಳುವುದಿಲ್ಲ, ಅವರು ಹರಾಜಿನಲ್ಲಿ ವಿವಿಧ ರೀತಿಯ ಮೀನುಗಳನ್ನು ಖರೀದಿಸಿ ಸ್ಥಳೀಯ ಮಾರುಕಟ್ಟೆ ಅಥವಾ ಹತ್ತಿರದ ಪಟ್ಟಣಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹರಾಜುದಾರರೊಂದಿಗೆ ಚೌಕಾಶಿ ನಡೆಸವುದು ಅವರ ದೈನಂದಿನ ವ್ಯವಹಾರದ ಒಂದು ಭಾಗ. ಉತ್ತಮ ಬೆಲೆಯನ್ನು ಪಡೆಯಲು ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರ ಶೈಲಿಯನ್ನು ಹೊಂದಿದ್ದಾರೆ. ಕೆಲವರು ಹರಾಜಿನ ಪೂರ್ಣ ಮೊತ್ತವನ್ನು ಕೊನೆಯಲ್ಲಿ ನೀಡಲು ಒಪ್ಪುತ್ತಾರೆ ಆದರೆ ಹರಾಜುದಾರನ ಬಳಿ ಒಂದಿಷ್ಟು ಮೀನು ಹೆಚ್ಚು ಕೊಡುವಂತೆ ಮನವೊಲಿಸುತ್ತಾರೆ. ಇನ್ನೂ ಕೆಲವರು ಹರಾಜು ಪ್ರಕ್ರಿಯೆ ಮುಗಿದ ನಂತರ ಗುಟ್ಟಾಗಿ ಚೌಕಾಶಿ ನಡೆಸಿ ಸಣ್ಣ ಮಟ್ಟದ (ಕೆಲವೊಮ್ಮೆ 5 ರೂಪಾಯಿ ಸಹ) ರಿಯಾಯಿತಿಯನ್ನೂ ಪಡೆಯುತ್ತಾರೆ.

ಮೀನು ಮಾರಾಟದ ದೀರ್ಘ ದಿನಚರಿ ಮೀನಿನ ಕೊರತೆ, ರಾತ್ರಿ ಊಟಕ್ಕೆ ಯಾವ ಮೀನಿನ ಸಾರು ಮಾಡುವುದು ಎನ್ನುವಂತಹ  ಚರ್ಚೆಗಳೊಂದಿಗೆ ಸಾಗುತ್ತದೆ. ಇಲ್ಲಿ ಮಹಿಳೆಯಲು ಮೀನು ಕ್ಲೀನ್‌ ಮಾಡುವುದು, ಬೇಕಾದ ಅಳತೆಗೆ ಕತ್ತರಿಸಿ ಕೊಡುವುದು, ನಂತರ ಅವುಗಳನ್ನು ತೊಳೆಯುವುದು ಹೀಗೆ ಮೀನು ಸಾರು ಮಾಡಲು ತಯಾರಾಗುವ ತನಕ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಇವರು ಮಾಡಿಕೊಡುತ್ತಾರೆ. ಇವರ ಅಳತೆಗೆ ತಕ್ಕಂತೆ ಮೀನು ಕತ್ತರಿಸುವ ನೈಪುಣ್ಯ ಯಾವ ಸರ್ಜರಿಗೂ ಕಡಿಮೆಯಿಲ್ಲ.

“ನಾನು ಒಂಭತ್ತನೇ ತರಗತಿಗೆ ಶಾಲೆ ಬಿಟ್ಟೆ. ಅಂದಿನಿಂದ ಈ ಮೀನು ಒಣಗಿಸುವ ಕೆಲಸ ಮಾಡುತ್ತಿದ್ದೇನೆ. ಹೊಟ್ಟೆಯ ಪಾಡಿಗೆ  ಏನಾದರೂ ಮಾಡಲೇಬೇಕಿತ್ತು ಹಾಗಾಗಿ ಈ ಕೆಲಸವನ್ನು ಮಾಡುತ್ತಿದ್ದೇನೆ.” ಎನ್ನುತ್ತಾರೆ 42 ವರ್ಷದ ಬೆನ್ನಿ ಫೆರ್ನಾಂಡಿಸ್. ತಿಂಗಳಿಗೆ ಅಂದಾಜು 4,000 ಸಂಪಾದಿಸುವ ಇವರು ಮಾಲ್ವಾಣ್ ತಾಲೂಕಿನ ದೇವಬಾಗ ಎನ್ನುವ ಊರಿನವರು. ಇವರು ಒಂದು ಹೆಗಲಿನಲ್ಲಿ ಮೀನಿನ ಬುಟ್ಟಿ ಇನ್ನೊಂದು ಹೆಗಲಿನಲ್ಲಿ ತನ್ನ ಮಗುವನ್ನು ಎತ್ತಿಕೊಂಡು ಚಾಕಚಕ್ಯತೆಯಿಂದ ಕೆಲಸ ಮಾಡುತ್ತಾರೆ. ಈ ಮೀನು ಒಣಗಿಸುವ ಕೆಲಸವನ್ನೂ ದೇಶದೆಲ್ಲೆಡೆ ಮಹಿಳೆಯರೇ ಮಾಡುತ್ತಾರೆ. ಈ ಕೆಲಸ ಮಾಡಲು ಗಂಟೆಗಟ್ಟಲೆ ಸುಡುವ  ಬಿಸಿಲಿನಲ್ಲಿರಬೇಕಾಗುತ್ತದೆ. “ಮಳೆಗಾಲದಲ್ಲಿ ನಮಗೆ ಮೀನು ಒಣಗಿಸುವ ಕೆಲಸ ಇರುವುದಿಲ್ಲ. ಆ ಸಮಯದಲ್ಲಿ ಸಿಗುವ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತೇವೆ” ಎನ್ನುತ್ತಾರೆ ಬೆನ್ನಿ.

ಹಿಮಾನ್ಷಿ, ಜುವನಿತಾ ಮತ್ತು ಬೆನ್ನಿಯಂತಹ ಮಹಿಳೆಯರು ವಿಶೇಷವಾಗಿ ಮೀನುಗಾರಿಕಾ ಸಮುದಾಯದ ದುರ್ಬಲ ಮಹಿಳೆಯರು. ಅಧ್ಯಯನದ ಪ್ರಕಾರ ಇವರ ಮೇಲೆ ಮೀನುಗಾರಿಕೆಯ ಪ್ರಸ್ತುತ ಸ್ಥಿತಿ ಬಹಳ ಗಂಭೀರ ಪರಿಣಾಮ ಬೀರಿದೆ. ಅತಿಯಾದ ಮೀನುಗಾರಿಕೆ, ಯಾಂತ್ರಿಕ ಮೀನುಗಾರಿಕೆಯ ಬಾಹುಳ್ಯ, ಕಡಿಮೆಯಾಗುತ್ತಿರುವ ಮೀನಿನ ಲಭ್ಯತೆ, ಹವಮಾನ ಬದಲಾವಣೆ ಮತ್ತಿತರ ಸಮಸ್ಯೆಗಳು ಈ ಸಣ್ಣ ಮಟ್ಟದಲ್ಲಿ ಮೀನುಗಾರಿಕೆ ನಡೆಸುವವರನ್ನು ವಿಶೇಷವಾಗಿ ಬಾಧಿಸುತ್ತಿದೆ.

ಮಹಿಳೆಯರೂ ಪುರುಷರಂತೆಯೇ ಈ ಉದ್ಯೋಗದ ಮೇಲೆ ಅವಲಂಬಿತರಾಗಿದ್ದರೂ ಈ ಉದ್ಯೋಗದಲ್ಲಿರುವ ಬಹುತೇಕ ಮಹಿಳೆಯರಿಗೆ ಪುರುಷರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಸಬ್ಸಿಡಿಗಳು ಸಿಗುತ್ತಿಲ್ಲ. ಉದಾಹರಣೆಗೆ ಮಳೆಗಾಲದಲ್ಲಿ ಮೀನುಗಾರಿಕೆಯ ಮೇಲೆ ನಿಷೇಧವಿದ್ದಾಗ ಪುರುಷರಿಗೆ ಸಿಗುವಂತೆ ಮೀನುಗಾರ ಮಹಿಳೆಯರಿಗೆ(ಪುರುಷನಿಲ್ಲದ) ಅದೇ ಪರಿಹಾರ ದೊರೆಯುವುದಿಲ್ಲ.

ಸಂಜೆಯ ಸಮಯಕ್ಕೆ ಮರಳಿ ದಾಂಡಿ ಕಡಲ ತೀರಕ್ಕೆ ಬಂದರೆ ಇಲ್ಲಿನ ಮಹಿಳೆಯರು ಮಕ್ಕಳ ಚಾಕರಿ, ಮನೆಗೆಲಸ ಇತ್ಯಾದಿಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುತ್ತಾರೆ. ಕಡಲಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಅವರ ಕೆಲಸಗಳು ಕಡಲ ತೀರದಿಂದ ಮನೆಗೆ ಸ್ಥಳಾಂತರಗೊಳ್ಳುತ್ತವೆ.
PHOTO • Manini Bansal

ʼಮೀನು ಕೊಳ್ಳುವುದು ಅದಕ್ಕೆ ಐಸ್‌ ಹಾಕುವುದು, ಸಂಗ್ರಹಿಸಿಡುವುದು ಮತ್ತೆ ಕೊನೆಗೆ ಅದನ್ನು ಕತ್ತರಿಸಿ ಮಾರುವುದು ಹೀಗೆ ಬಹಳ ತ್ರಾಸದಾಯಕವಾದ ಕೆಲಸವಿದುʼ ಎನ್ನುತ್ತಾರೆ ಜುನಿತಾ ಎನ್ನುವ ಮೀನು ವ್ಯಾಪಾರಿ ಮಹಿಳೆ


Left: 'We need to do something to fill our stomachs', says an elderly fisherwoman, as she walks a kilometre across Dandi beach in Malwan to the auction site to sell her family’s catch of tarli (sardine). Right: Women wash the fish to be to be salted and sun-dried
PHOTO • Manini Bansal
Left: 'We need to do something to fill our stomachs', says an elderly fisherwoman, as she walks a kilometre across Dandi beach in Malwan to the auction site to sell her family’s catch of tarli (sardine). Right: Women wash the fish to be to be salted and sun-dried
PHOTO • Manini Bansal

ಎಡ: ʼನಮ್ಮ ಹೊಟ್ಟೆಪಾಡಿಗಾಗಿ ಏನಾದರೂ ಮಾಡಲೇಬೇಕುʼ ಎನ್ನುತ್ತಾರೆ ಹಿರಿಯ ಮೀನುಗಾರ ಮಹಿಳೆ. ಇವರು ಮಲ್ವಾನ್‌ನ ದಾಂಡಿ ಕಡಲ ತೀರದಲ್ಲಿನ ಹರಾಜು ಕಟ್ಟೆಯಲ್ಲಿ ತಮ್ಮ ಕುಟುಂಬ ಹಿಡಿದ ತಾರ್ಲಿ (ಮತ್ತಿ,ಬೂತಾಯಿ) ಮೀನು ಮಾರಲು ಮೈಲುಗಟ್ಟಲೆ ನಡೆಯುತ್ತಾರೆ. ಬಲ: ಒಣಗಿಸಿ ಉಪ್ಪು ಹಾಕಬೇಕಿರುವ ಮೀನುಗಳನ್ನು ಮಹಿಳೆಯರು ತೊಳೆಯುತ್ತಿರುವುದು


PHOTO • Manini Bansal

ಮಾಲ್ವಾಣ್ ತಾಲೂಕಿನ ದಾಂಡಿ ಕಡಲ ತೀರದಲ್ಲಿರುವ ಮೀನು ಮಾರುಕಟ್ಟೆ. ಭಾರತದಲ್ಲಿ ಮೀನುಗಾರಿಕೆ ನಂತರದ ಕೆಲಸಗಳಲ್ಲಿ ಸುಮಾರು 66.7 ಶೇಕಡಾದಷ್ಟು ಮಹಿಳೆಯರೇ ಇದ್ದಾರೆ. ಅವರು ಈ ಉದ್ಯಮದ ಬಹುಮುಖ್ಯ ಭಾಗವಾಗಿ ಕಾರ್ಯನಿರ್ವಹಿಸುತ್ತಾರೆ


PHOTO • Manini Bansal

ಸುರ್ಮಯಿ (ಅಂಜಲ್)‌ ಮೀನನ್ನು ಹೋಳುಗಳನ್ನಾಗಿ ಮಾಡುತ್ತಿರುವುದು. ಮೀನು ಕತ್ತರಿಸಿ, ಸ್ವಚ್ಛಗೊಳಿಸಿ ತೊಳೆಯುವುದರ ತನಕ ಎಲ್ಲವನ್ನೂ ಎಚ್ಚರಿಕೆಯಿಂದ ಮತ್ತು ನೈಪುಣ್ಯತೆಯಿಂದ ಮಾಡುತ್ತಾರೆ


PHOTO • Manini Bansal

ಬಾಂಗ್ಡಾ ಮೀನುಗಳನ್ನು ಸುತ್ತಿ ಇರಿಸಿರುವುದು. ನಂತರ ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ


PHOTO • Manini Bansal

ʼಸ್ಥಳೀಯ ಮಹಿಳೆಯರು ಸಾಮಾನ್ಯವಾಗಿ ಮೀನು ಮಾರುವ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಅವರಿಗೆ ಮೀನು ಹಿಡಿಯಲು ಕಡಲಿಗಿಳಿಯಬೇಕಾದ ಅಗತ್ಯ ಮತ್ತು ಅವಕಾಶ ಎರಡೂ ಇಲ್ಲ. ಆದರೆ ನನಗೆ ಬೇರೆ ದಾರಿಯಿಲ್ಲ, ಸಹಾಯಕ್ಕೆ ಯಾರೂ ಇಲ್ಲದಿರುವುದರಿಂದ ನಾನೇ ಹೋಗಬೇಕುʼ ಎನ್ನುತ್ತಾರೆ ಹಿಮಾನ್ಷಿ. ಕಡಲಿನಲ್ಲಿ ಆ ದಿನದ ಮೀನು ಹಿಡಿದ ನಂತರ ಮಿನುಗಾರರು ತಾವು ಹಿಡಿದ ಮೀನುಗಳನ್ನು ಬೇರ್ಪಡಿಸಲು ಸಹಾಯಕರನ್ನು ನೇಮಿಸಿಕೊಳ್ಳುತ್ತಾರೆ (ಸಾಮಾನ್ಯವಾಗಿ ಪುರುಷರು) ಮತ್ತು ಅವರಿಗೆ ದಿನಕ್ಕೆ 500 ರೂಪಾಯಿಗಳ ಕೂಲಿ ಕೊಡುತ್ತಾರೆ


PHOTO • Manini Bansal

ಹಿಮಾನ್ಷಿ ಮತ್ತು ಅವರ ಪತಿ ಮೀನು ಹಿಡಿಯಲು ಮಾತ್ರ ಒಟ್ಟಿಗೆ ಹೋಗುವುದಿಲ್ಲ, ದಾಂಡಿ ಕಡಲ ತೀರದ ಮಾರುಕಟ್ಟೆಯಲ್ಲಿ ಮೀನು ಕ್ಲೀನ್‌ ಮಾಡುವುದು ಮತ್ತು ಕತ್ತರಿಸುವುದನ್ನೂ ಒಟ್ಟಿಗೆ ಮಾಡುತ್ತಾರೆ


Selling her fish in the evening auction (left) and everyday banter at the evening auction (right). The last Marine Fisheries Census (2010) records about 4 lakh women in the post-harvest workforce in marine fisheries (involved in all activities except the actual fishing process)
PHOTO • Manini Bansal
Selling her fish in the evening auction (left) and everyday banter at the evening auction (right). The last Marine Fisheries Census (2010) records about 4 lakh women in the post-harvest workforce in marine fisheries (involved in all activities except the actual fishing process)
PHOTO • Manini Bansal

ತನ್ನ ಮೀನುಗಳನ್ನು ಸಂಜೆಯ ಹರಾಜಿನಲ್ಲಿ ಮಾರುತ್ತಿರುವುದು. (ಎಡ) ಹರಾಜುಕಟ್ಟೆಯಲ್ಲಿ ದೈನಂದಿನ ಚರ್ಚೆಗಳು. ಕೊನೆಯ ಸಾಗರ ಮೀನುಗಾರಿಕೆ ಗಣತಿ (2010) ಕಡಲಿನಲ್ಲಿ ಮೀನು ಹಿಡಿದ ನಂತರದ ಉದ್ಯೋಗಗಳಲ್ಲಿ ಸುಮಾರು 4 ಲಕ್ಷ ಮಹಿಳೆಯರು ಇರುವುದನ್ನು ದಾಖಲಿಸಿದೆ


Left: Manisha Jadhav, head of the local fisherwomen’s association, Sindhusagar Macchi Vikri Mahila Sanghatna, Malwan, exudes confidence as she sits with her fish in the market. Right: Women of the community
PHOTO • Manini Bansal
Left: Manisha Jadhav, head of the local fisherwomen’s association, Sindhusagar Macchi Vikri Mahila Sanghatna, Malwan, exudes confidence as she sits with her fish in the market. Right: Women of the community
PHOTO • Manini Bansal

ಎಡ: ಮನಿಷಾ ಜಾಧವ್‌, ಸ್ಥಳೀಯ ಮೀನುಗಾರಿಕಾ ಮಹಿಳಾ ಸಂಘಟನೆಯ ನಾಯಕಿ. ಸಿಂಧು ಸಾಗರ್‌ ಮಚ್ಚಿ ವಿಕ್ರಿ ಮಹಿಳಾ ಸಂಘಟನ್‌, ಮಾಲ್ವಾಣ್, ಮೀನು ಮಾರುವ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡುತ್ತಿದೆ. ಬಲ: ಸಮುದಾಯದ ಮಹಿಳೆಯರು


PHOTO • Manini Bansal

ದಾಂಡಿ ಮೀನು ಮಾರುಕಟ್ಟೆಯಲ್ಲಿ ಸಿಂಧು ಸಾಗರ್‌ ಮಚ್ಚಿ ವಿಕ್ರಿ ಮಹಿಳಾ ಸಂಘಟನ್‌, ಮಾಲ್ವಣ್‌, ಇದರ ಸದಸ್ಯರ ಭಾವಚಿತ್ರಗಳು ಇರುವ ಬೋರ್ಡ್


PHOTO • Manini Bansal

ಬೆಳಗಿನ ಕೊನೆಯ ಮೀನನ್ನು ಮಾರಿದ ನಂತರ ತನ್ನ ಬುಟ್ಟಿಯನ್ನು ತೊಳೆಯುತ್ತಿರುವುದು


ಈ ಲೇಖನವನ್ನು ದಕ್ಷಿಣ್ ಪೌಂಡೇಷನ್‌ನ ಯೋಜನೆಯ ಭಾಗವಾಗಿ ಬರೆಯಲಾಗಿದೆ.

ಅನುವಾದ: ಶಂಕರ ಎನ್. ಕೆಂಚನೂರು

Trisha Gupta

Trisha Gupta is a Bengaluru-based marine conservationist studying shark and ray fisheries along the Indian coastline.

Other stories by Trisha Gupta
Manini Bansal

Manini Bansal is a Bengaluru-based visual communication designer and photographer working in the field of conservation.

Other stories by Manini Bansal
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru