"ಇದು ಆಚರಣೆಗೆ ಸೂಕ್ತ ದಿನ. ಹವಾಮಾನ ಕೂಡ ಸುಂದರವಾಗಿದೆ," ಎಂದು ಲೇಹ್ ಜಿಲ್ಲೆಯ ರಸ್ತೆ ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕೆಲಸ ಮಾಡುವ ಪೆಮಾ ರಿಂಚೆನ್ ಹೇಳಿದರು.
ಲಡಾಖ್‌ನ ಹಾನ್ಲೆ (ಆನ್ಲೆ ಎಂದೂ ಉಚ್ಚರಿಸಲಾಗುತ್ತದೆ) ಗ್ರಾಮದ ನಿವಾಸಿಯಾಗಿರುವ 42 ವರ್ಷದ ರಿಂಚೆನ್ ಟಿಬೆಟಿಯನ್ ಕ್ಯಾಲೆಂಡರಿನ ಪ್ರಮುಖ ಹಬ್ಬವಾದ ಸಗಾ ದಾವಾ ವನ್ನು ಉಲ್ಲೇಖಿಸುತ್ತಿದ್ದಾರೆ. ಇದನ್ನು ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬೌದ್ಧರು ಆಚರಿಸುತ್ತಾರೆ. ಟಿಬೆಟಿಯನ್ ಭಾಷೆಯಲ್ಲಿ, 'ಸಗಾ' ಎಂದರೆ ನಾಲ್ಕು ಮತ್ತು ' ದಾ ವಾ ' ಎಂಬುದು ತಿಂಗಳು. ಸಗ ದಾ ವಾ ಮಾಸವನ್ನು 'ಪುಣ್ಯಗಳ ತಿಂಗಳು' ಎಂದು ಕರೆಯಲಾಗುತ್ತದೆ - ಈ ಅವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳಿಗೆ ಒಳ್ಳೆಯ ಪ್ರತಿಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
"ಈ ಹಿಂದೆ, ಪ್ರತಿಯೊಂದು ಊರು ಆಯಾ ಪ್ರದೇಶಗಳಲ್ಲಿ ಸಾಗಾ ದಾವಾವನ್ನು ಆಚರಿಸುತ್ತಿತ್ತು. ಆದರೆ ಈ ವರ್ಷ [2022], ಆರು ಊರುಗಳು ಒಟ್ಟಿಗೆ ಆಚರಿಸಲಿವೆ," ಎಂದು ಹನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಲ್ಲಿ ಕೆಲಸ ಮಾಡುತ್ತಿರುವ ನಾಗಾ ಎನ್ನುವ ಊರಿನ ನಿವಾಸಿ 44 ವರ್ಷದ ಸೋನಂ ದೋರ್ಜೆ ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಎರಡು ವರ್ಷಗಳ ನಿರ್ಬಂಧಿತ ಆಚರಣೆಗಳ ನಂತರ, ಪುಂಗುಕ್, ಖುಲ್ಡೋ, ನಾಗಾ, ಶಾಡೋ, ಭೋಕ್ ಮತ್ತು ಜಿಂಗ್ಸೋಮಾ ಎನ್ನುವ ಊರುಗಳು ಒಟ್ಟಿಗೆ ಸೇರಿ ಆಚರಿಸಲು ನಿರ್ಧರಿಸದವು. ಈ ವಿರಳ ಜನಸಂಖ್ಯೆಯ ಕುಗ್ರಾಮಗಳು 1,879 ಜನರ ಜನಸಂಖ್ಯೆಯನ್ನು ಹೊಂದಿರುವ ಹಾನ್ಲೆ ಗ್ರಾಮದ ಒಂದು ಭಾಗವಾಗಿದೆ (ಜನಗಣತಿ 2011).
ಬೌದ್ಧರ ಮಹಾಯಾನ ಪಂಥದಿಂದ ಆಚರಿಸಲ್ಪಡುವ ಸಗಾ ದಾವಾ ವನ್ನು ಟಿಬೆಟಿಯನ್ ಚಾಂದ್ರಮಾನ ಪಂಚಾಂಗದ ನಾಲ್ಕನೇ ತಿಂಗಳಿನ 15ನೇ ದಿನದಂದು ಆಚರಿಸಲಾಗುತ್ತದೆ; 2022ರಲ್ಲಿ, ಇದು ಜೂನ್ ತಿಂಗಳಲ್ಲಿ ಬಂದಿತು. ಟಿಬೆಟಿಯನ್ ಭಾಷೆಯಲ್ಲಿ, 'ಸಗಾ' ನಾಲ್ಕನೇ ಸಂಖ್ಯೆ ಮತ್ತು 'ದಾವಾ' ತಿಂಗಳು. ಸ ಗಾ ದಾ ವಾ ಮಾಸವನ್ನು 'ಪುಣ್ಯಗಳ ತಿಂಗಳು' ಎಂದು ಕರೆಯಲಾಗುತ್ತದೆ - ಈ ಅವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳು ಅನೇಕ ಬಾರಿ ಪ್ರತಿಫಲವನ್ನು ಪಡೆಯುತ್ತವೆ ಎಂದು ಹೇಳಲಾಗುತ್ತದೆ. ಈ ಹಬ್ಬವು ಬುದ್ಧನನ್ನು ಸ್ಮರಿಸುತ್ತದೆ ಮತ್ತು ಅವನ ಜನನ, ಜ್ಞಾನೋದಯ ಮತ್ತು ಪರಿನಿರ್ವಾಣ ಅಥವಾ ಸಂಪೂರ್ಣ ನಿರ್ವಾಣವನ್ನು ಸೂಚಿಸುತ್ತದೆ.

17ನೇ ಶತಮಾನದ ಹಾ ನ್ಲೆ ಮಠವು ಪರ್ವತದ ತುದಿಯಲ್ಲಿದೆ. ಇದು ಟಿಬೆಟಿಯನ್ ಬೌದ್ಧರ ಟಿಬೆಟಿಯನ್ ಡ್ರುಕ್ಪಾ ಕಗ್ಯು ಪಂಥಕ್ಕೆ ಸೇರಿದೆ

ಚಾಂಗ್ಥಾಂಗ್ ಟಿಬೆಟಿಯನ್ ಪ್ರಸ್ಥಭೂಮಿಯ ಪಶ್ಚಿಮ ಭಾಗ. ಇಲ್ಲಿನ ಹಾನ್ಲೆ ನದಿ ಕಣಿವೆಯು ಸರೋವರಗಳು, ಗದ್ದೆಗಳು ಮತ್ತು ನದಿ ಜಲಾನಯನ ಪ್ರದೇಶಗಳಿಂದ ಕೂಡಿದೆ
ಲಡಾಖ್ ಲೇಹ್ ಜಿಲ್ಲೆಯಲ್ಲಿ ಸುಮಾರು 66 ಪ್ರತಿಶತದಷ್ಟು ಜನಸಂಖ್ಯೆಯು ಬೌದ್ಧ ಧರ್ಮಕ್ಕೆ ಸೇರಿದೆ (ಜನಗಣತಿ 2011). ಲಡಾಖ್ 2019 ರ ಅಕ್ಟೋಬರ್ನಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. ಪೂರ್ವ ಮತ್ತು ಮಧ್ಯ ಲಡಾಖ್ನ ಜನಸಂಖ್ಯೆಯ ಬಹುಪಾಲು ಟಿಬೆಟಿಯನ್ ಮೂಲದವರು ಮತ್ತು ಈ ಪ್ರದೇಶದ ಬೌದ್ಧ ಮಠಗಳಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ
ಸಗಾ ದಾವಾ ದಲ್ಲಿ , ಟಿಬೆಟಿಯನ್ ಬೌದ್ಧರು ಮಠಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಿ, ಬಡವರಿಗೆ ಭಿಕ್ಷೆ ನೀಡಿ, ಮಂತ್ರಗಳನ್ನು ಪಠಿಸುತ್ತಾ ದಿನವನ್ನು ಕಳೆಯುತ್ತಾರೆ.
ಪೂರ್ವ ಲಡಾಖ್ನ ಹಾನ್ಲೆ ನದಿ ಕಣಿವೆಯ ಚಾಂಗ್ಪಾಗಳಂತಹ ಗ್ರಾಮೀಣ ಅಲೆಮಾರಿ ಸಮುದಾಯಗಳು ಬೌದ್ಧರಾಗಿದ್ದು, ಸಗಾ ದಾವಾ ಗೆ ಹೆಚ್ಚಿನ ಮಹತ್ವವನ್ನು ನೀಡುತ್ತವೆ. ಈ ವರದಿಗಾರ 2022ರ ಬೇಸಿಗೆಯಲ್ಲಿ ಲೇಹ್ ಜಿಲ್ಲಾ ಕೇಂದ್ರದಿಂದ ಆಗ್ನೇಯಕ್ಕೆ ಸುಮಾರು 270 ಕಿಲೋಮೀಟರ್ ದೂರದಲ್ಲಿರುವ ಹಾನ್ಲೆ ನದಿ ಕಣಿವೆಗೆ ಭೇಟಿ ನೀಡಿ ಉತ್ಸವವನ್ನು ವೀಕ್ಷಿಸಿದರು. ಭಾರತ-ಚೀನಾ ಗಡಿಯ ಸಮೀಪವಿರುವ ಸುಂದರವಾದ ಮತ್ತು ಒರಟಾದ ಪ್ರದೇಶವಾದ ಹಾನ್ಲೆ ನದಿ ಕಣಿವೆಯು ಖಾಲಿ ಭೂಮಿ, ಸ್ನೇಕಿಂಗ್ ನದಿಗಳು ಮತ್ತು ಸುತ್ತಲೂ ಎತ್ತರದ ಪರ್ವತಗಳಿಂದ ಗುರುತಿಸಲ್ಪಟ್ಟಿದೆ. ಇದು ಚಾಂಗ್ಥಾಂಗ್ ವನ್ಯಜೀವಿ ಅಭಯಾರಣ್ಯದ ಭಾಗವಾಗಿದೆ.
ಹಬ್ಬದ ದಿನ ಬೆಳಿಗ್ಗೆ 8 ಗಂಟೆಗೆ ಹಾನ್ಲೆ ಗ್ರಾಮದ ಸ್ಥಳೀಯ ಮಠದಲ್ಲಿ, ಮೆರವಣಿಗೆ ಪ್ರಾರಂಭವಾಗಲಿತ್ತು. ಉತ್ಸವದ ಆಯೋಜಕ ಸಮಿತಿಯ ಮುಖ್ಯಸ್ಥ ದೋರ್ಜೆ ಬುದ್ಧನ ಪ್ರತಿಮೆಯನ್ನು ಹೊತ್ತ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಬೆಳಿಗ್ಗೆ 8:30ರ ಹೊತ್ತಿಗೆ ಆವರಣವು ಹಳ್ಳಿಯ ಮತ್ತು ಭಾಗವಹಿಸುವ ನೆರೆಯ ಊರುಗಳ ಭಕ್ತರಿಂದ ತುಂಬಿಹೋಗಿತ್ತು. ಮಹಿಳೆಯರು ಸಲ್ಮಾ ಎಂದು ಕರೆಯಲ್ಪಡುವ ಟೋಪಿಗಳು ಮತ್ತು ನೆಲೆನ್ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಉದ್ದನೆಯ ನಿಲುವಂಗಿಗಳನ್ನು ಧರಿಸುತ್ತಾರೆ.
ಸೋನಮ್ ದೋರ್ಜೆ ಮತ್ತು ಅವರ ಸ್ನೇಹಿತರು ಬುದ್ಧನನ್ನು ಗೊಂಪಾ (ಮಠ) ದಿಂದ ಹೊರಗೆ ಹಾರಿಸುತ್ತಾರೆ ಮತ್ತು ಪ್ರತಿಮೆಯನ್ನು ಮೆಟಡೋರ್ ವ್ಯಾನ್ ಮೇಲೆ ಇರಿಸುತ್ತಾರೆ. ವಾಹನವನ್ನು ಹಬ್ಬದ ಪ್ರಾರ್ಥನಾ ಧ್ವಜಗಳಿಂದ ಮುಚ್ಚಲಾಗಿತ್ತು ಮತ್ತದು ವರ್ಣರಂಜಿತ ರಥವನ್ನು ಹೋಲುತ್ತಿತ್ತು. ಸರಿಸುಮಾರು 50 ಜನರ ಬೆಂಗಾವಲು ಪಡೆ ಕಾರುಗಳು ಮತ್ತು ವ್ಯಾನ್ ಗಳಲ್ಲಿ 17ನೇ ಶತಮಾನದ ಟಿಬೆಟಿಯನ್ ಬೌದ್ಧ ಧರ್ಮದ ಡ್ರುಕ್ಪಾ ಕಗ್ಯು ಕ್ರಮಕ್ಕೆ ಸಂಬಂಧಿಸಿದ 17 ನೇ ಶತಮಾನದ ಸ್ಥಳವಾದ ಹಾನ್ಲೆ ಮಠದ ಕಡೆಗೆ ಸಾಗುತ್ತದೆ.

ಸೋನಮ್ ದೋ ರ್ಜೆ (ಎಡಕ್ಕೆ) ಮತ್ತು ಅವ ರ ಗ್ರಾಮಸ್ಥರು ಉತ್ಸವಕ್ಕಾಗಿ ಖಾಲ್ಡೋ ಗ್ರಾಮದ ಮೆನೆ ಖಾಂಗ್ ಮಠದಿಂದ ಬುದ್ಧನ ವಿಗ್ರಹವನ್ನು ಒಯ್ಯು ತ್ತಿರುವುದು

ವಿಗ್ರಹವನ್ನು ಟಿಬೆಟಿಯನ್ ಪ್ರಾರ್ಥನಾ ಧ್ವಜಗಳಿಂದ ಮುಚ್ಚಿದ ಮೆಟಡಾರ್ ವ್ಯಾನ್ ಮೇಲೆ ಇರಿಸಲಾಗುತ್ತದೆ, ಅವುಗಳನ್ನು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಲಾಗಿದೆ. ಧ್ವಜದಲ್ಲಿರುವ ಪ್ರತಿಯೊಂದು ಬಣ್ಣವು ಒಂದು ಅಂಶವನ್ನು ಪ್ರತಿನಿಧಿಸುತ್ತದೆ, ಅವು ಒಟ್ಟಾಗಿ ಸಮಾನತೆಯನ್ನು ಸೂಚಿಸುತ್ತವೆ
ಹನ್ಲೆ ಮಠದಲ್ಲಿ(monastery, ಬೌದ್ಧ ಆಧ್ಯಾತ್ಮಿಕ ಗುರುಗಳು ಅಥವಾ ಕೆಂಪು ಟೋಪಿಗಳನ್ನು ಧರಿಸಿದ ಲಾಮಾಗಳು ಬೆಂಗಾವಲು ಪಡೆಯನ್ನು ಸ್ವಾಗತಿಸುತ್ತಾರೆ. ಭಕ್ತರು ಆವರಣವನ್ನು ಪ್ರವೇಶಿಸುತ್ತಿದ್ದಂತೆ, ಅವರ ಧ್ವನಿಯ ಶಬ್ದವು ಆವರಣದ ಮೂಲಕ ಪ್ರತಿಧ್ವನಿಸುತ್ತದೆ. "ಹೆಚ್ಚಿನ ಭಕ್ತರು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹಾನ್ಲೆ ನಿವಾಸಿ ಮತ್ತು ಅವರ 40 ರ ದಶಕದ ಮಧ್ಯದಲ್ಲಿರುವ ಪೆಮಾ ಡೋಲ್ಮಾ ಹೇಳಿದರು.
ಆಚರಣೆಗಳು ನಡೆಯುತ್ತಿವೆ ಮತ್ತು ಡೋಲುಗಳನ್ನು ಬಾರಿಸುವ ಮತ್ತು ಕಹಳೆಗಳನ್ನು ಊದುವ ಶಬ್ದವು ಮೆರವಣಿಗೆ ಹೊರಟಿದೆ ಎನ್ನುವುದನ್ನು ಸಾರುತ್ತಿತ್ತು. ಕೆಲವರು ಹಳದಿ ಬಟ್ಟೆಯಲ್ಲಿ ಸುತ್ತಿದ ಬೌದ್ಧ ಧರ್ಮಗ್ರಂಥಗಳನ್ನು ಹಿಡಿದಿದ್ದರು.
ಮೆರವಣಿಗೆಯು ಕಡಿದಾದ ಇಳಿಜಾರಿನಲ್ಲಿ ಇಳಿಯುತ್ತದೆ, ಲಾಮಾಸ್ ಮುಂಭಾಗದಿಂದ ಮುನ್ನಡೆಸುತ್ತಾರೆ. ಅವರು ಮಠದೊಳಗಿನ ಅಭಯಾರಣ್ಯವನ್ನು ಸುತ್ತುತ್ತಾರೆ. ನಂತರ ಜನಸಮೂಹವು ಲಾಮಾಗಳ ಗುಂಪಾಗಿ ಮತ್ತು ಮತ್ತೊಂದು ಭಕ್ತರ ಗುಂಪಾಗಿ ವಿಭಜನೆಗೊಳ್ಳುತ್ತದೆ ಮತ್ತು ಎರಡು ಮೆಟಡಾರ್ ವಾಹನಗಳಲ್ಲಿ ಅವರು ಪ್ರಯಾಣ ಮಾಡುತ್ತಾರೆ. ಈಗ ಅವರು ಖುಲ್ಡೋ, ಶಾಡೋ, ಪುಂಗುಕ್, ಭೋಕ್ ಎಂಬ ಕುಗ್ರಾಮಗಳ ಮೂಲಕ ಸಾಗಿ ನಾಗಾದಲ್ಲಿ ಪ್ರಯಾಣವನ್ನು ಕೊನೆಗೊಳಿಸುತ್ತಾರೆ.
ಖುಲ್ಡೋದಲ್ಲಿ ಭಕ್ತರನ್ನು ಬನ್, ತಂಪು ಪಾನೀಯಗಳು ಮತ್ತು ಉಪ್ಪಿನ ಚಹಾದೊಂದಿಗೆ ಸ್ವಾಗತಿಸಲಾಗುತ್ತದೆ. ಪುಂಗುಕ್ ಎನ್ನುವಲ್ಲಿ, ಲಾಮಾಗಳು ಮತ್ತು ಭಕ್ತರು ಹತ್ತಿರದ ಪರ್ವತವನ್ನು ಸುತ್ತುತ್ತಾರೆ ಮತ್ತು ಪ್ರಕಾಶಮಾನವಾದ ನೀಲಿ ಆಕಾಶದ ಕೆಳಗೆ ತೊರೆಗಳು ಮತ್ತು ಹುಲ್ಲುಗಾವಲುಗಳಲ್ಲಿ ನಡೆಯುತ್ತಾರೆ.
ನಾವು ನಾಗಾ ತಲುಪಿದಾಗ, ಲಾಮಾ ಜಿಗ್ಮೆಟ್ ದೋಶಾಲ್ ನಮ್ಮನ್ನು ಸ್ವಾಗತಿಸಿ, "ಇಂದಿನ ದಿನ ಹೇಗಿದೆ, ಸುಂದರವಾಗಿದೆ ಅಲ್ಲವೇ? ಇದನ್ನು ಶ್ರೇಷ್ಟ ತಿಂಗಳು ಎಂದೂ ಕರೆಯಲಾಗುತ್ತದೆ. ಪವಿತ್ರ ಗ್ರಂಥಗಳ ಹಿಂದೆ ಅಡಗಿರುವ ತತ್ವಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಅಧ್ಯಯನ ಮಾಡಬೇಕು."

44 ವರ್ಷದ ಅನ್ಮೊಂಗ್ ಸಿರಿಂಗ್ ಹಬ್ಬಕ್ಕೆ ಸಿದ್ಧವಾಗುತ್ತಿದ್ದಾರೆ. ಅವಳು ಸಲ್ಮಾವನ್ನು ಧರಿಸಿದ್ದಾ ರೆ , ಇ ದೊಂದು ಉಣ್ಣೆ, ಬ್ರೊಕೇಡ್, ವೆಲ್ವೆಟ್ ಮತ್ತು ರೇಷ್ಮೆಯಿಂದ ಮಾಡಿದ ಉದ್ದನೆಯ ಗೌನ್. ಇದನ್ನು ಟೈಲಿಂಗ್ ಎನ್ನುವ ಉಡುಪಿನೊಡನೆ Dರಿಸಧಲಾಗುತ್ತದೆ , ಹತ್ತಿ, ಇದೊಂದು ನೈಲಾನ್ ಅಥವಾ ರೇಷ್ಮೆಯಿಂದ ಮಾಡಿದ ರವಿಕೆ

ಬುದ್ಧನ ವಿಗ್ರಹದೊಂದಿಗೆ ಧಾರ್ಮಿಕ ಮೆರವಣಿಗೆಯು ಹಾ ನ್ಲೆ ಮಠವನ್ನು ತಲುಪುತ್ತದೆ. ಹಾನ್ಲೆ ಕಣಿವೆಯಲ್ಲಿರುವ ಇದು ಈ ಪ್ರದೇಶದ ಮುಖ್ಯ ಮಠವಾಗಿದೆ

ಆರು ಹಳ್ಳಿಗಳಿಂದ ಬರುವ ಭಕ್ತರ ಮೆರವಣಿಗೆ ಕಾರಿಡಾರ್ ಮೂಲಕ ಮಠಕ್ಕೆ ಹೋಗುತ್ತಿದೆ

ಹಾನ್ಲೆ ಮಠದ ಸನ್ಯಾಸಿಗಳು ಸಗಾ ದಾವಾ ಸಮಾರಂಭಕ್ಕಾಗಿ 'ಉಟುಕ್' ಎಂದು ಕರೆಯಲ್ಪಡುವ ದೊಡ್ಡ ಛತ್ರಿಯನ್ನು ತಯಾರಿಸುತ್ತಾರೆ

ಮಠದ ಒಳಗೆ, ಗ್ರಾಮಸ್ಥರಾದ ರಂಗೋಲ್ (ಎಡ) ಮತ್ತು ಕೆಸಾಂಗ್ ಏಂಜಲ್ (ಬಲ) ಪ್ರಾರ್ಥನಾ ಕಲಾಪಗಳನ್ನು ವೀಕ್ಷಿಸುತ್ತಿ ದ್ದಾರೆ

ಹಾನ್ಲೆ ಮಠದ ಪ್ರಮುಖ ಸನ್ಯಾಸಿಗಳಲ್ಲಿ ಒಬ್ಬರು ಸಗಾ ದಾವಾ ದಿನದಂದು ಆಚರಣೆಗಳನ್ನು ಕೈಗೊಳ್ಳುತ್ತಿರುವುದು

ಹಾ ನ್ಲೆ ಮಠಕ್ಕೆ ಸಂಬಂಧಿಸಿದ ಸನ್ಯಾಸಿ ಜಿಗ್ಮೆಟ್ ದೋಶಾಲ್ ಹೇಳುತ್ತಾರೆ, 'ಇದನ್ನು ಶ್ರೇಷ್ಟ ತಿಂಗಳು ಎಂದೂ ಕರೆಯಲಾಗುತ್ತದೆ. ಪವಿತ್ರ ಗ್ರಂಥಗಳ ಹಿಂದೆ ಅಡಗಿರುವ ತತ್ವಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಅಧ್ಯಯನ ಮಾಡಬೇಕು'

ಆಂಗ್ ಎಂಬ ಸಾಂಪ್ರದಾಯಿಕ ಸಂಗೀತ ವಾದ್ಯ ದೊಡನೆ ಯುವ ಲಾಮಾ ದೋ ರ್ಜೆ ಟೆಸ್ರಿಂಗ್

ಸಗಾ ದಾವಾ ಉತ್ಸವದ ಸಂಘಟಕರಲ್ಲಿ ಒಬ್ಬರಾದ ಸೋನಮ್ ದೋರ್ಜೆ, ಹಾ ನ್ಲೆ ಮಠದ ಪವಿತ್ರ ಸುರುಳಿಗಳನ್ನು ಒಯ್ಯು ತ್ತಿರುವುದು . ಈ ಪ್ರದೇಶದ ಹಳ್ಳಿಗಳಲ್ಲಿ ಸಂಚರಿಸುವಾಗ ಬುದ್ಧನ ವಿಗ್ರಹದೊಂದಿಗೆ ಧಾರ್ಮಿಕ ಸುರುಳಿಗಳು ಕೂಡಾ ಮೆರವಣಿಗೆಯಲ್ಲಿರುತ್ತವೆ

ಹಾನ್ಲೆ ಕಣಿವೆಯ ವಿವಿಧ ಹಳ್ಳಿಗಳ ಮಹಿಳೆಯರು ಪವಿತ್ರ ಸುರುಳಿಗಳನ್ನು ಒಯ್ಯು ತ್ತಿರುವುದು

ಈ ಹಬ್ಬದ ಸಮಯದಲ್ಲಿ ಲಾಮಾಗಳು ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ. ಚಿಕ್ಕದಾದ ಗಾಳಿ-ಉಪಕರಣ (ಎಡ) ಇದನ್ನು ಗೆಲಿಂಗ್ ಎಂದು ಕರೆಯಲಾಗುತ್ತದೆ, ಮತ್ತು ಉದ್ದವಾ ಗಿರುವುದನ್ನು (ಕೇಂದ್ರ) ತುಂಗ್ ಎಂದು ಕರೆಯಲಾಗುತ್ತದೆ

ಮೆರವಣಿಗೆ ಮುಂದುವರಿಯುತ್ತಿದ್ದಂತೆ ಲಾಮಾಗಳು ನ್ಲೆ ಕಣಿವೆಯ ಕಡಿದಾದ ಇಳಿಜಾರುಗಳ ಲ್ಲಿ ಇಳಿಯುತ್ತಾರೆ

ಈ ಮೆರವಣಿಗೆ ಯಲ್ಲಿ ಲಾಮಾ ಹಾನ್ಲೆ ನದಿಯ ಉದ್ದಕ್ಕೂ ಹಾನ್ಲೆ ಮಠವನ್ನು ಸುತ್ತು ಹಾಕುತ್ತಾರೆ

ಶಾಡೊ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಮೆರವಣಿಗೆಯು ಖಾಲ್ಡೋ ಗ್ರಾಮದ ಜನರು ವ್ಯವಸ್ಥೆ ಮಾಡಿದ ಬನ್, ತಂಪು ಪಾನೀಯಗಳು ಮತ್ತು ಉಪ್ಪಿನ ಚಹಾವನ್ನು ಸೇವಿಸಲು ವಿರಾಮ ತೆಗೆದುಕೊಳ್ಳುತ್ತದೆ. ಮೆರವಣಿಗೆಯ ಸದಸ್ಯರಿಗೆ ಉಪಾಹಾರವನ್ನು ಆಯೋಜಿಸುವುದು ಈ ಹಬ್ಬದ ಸಂಪ್ರದಾಯಗಳ ಭಾಗವಾಗಿದೆ

ಪವಿತ್ರ ಗ್ರಂಥಗಳನ್ನು ತಂದ ಲಾಮಾಗಳನ್ನು ಸ್ವಾಗತಿಸಲು ಮತ್ತು ಭೇಟಿಯಾಗಲು ಶಾಡೊ ಗ್ರಾಮದ ನಿವಾಸಿಗಳು ಗೊಂಪಾದಲ್ಲಿ ಒಟ್ಟುಗೂಡುತ್ತಾರೆ

ಹಾನ್ಲೆ ಮಠದ ಲಾಮಾಗಳು ತಮ್ಮ ಪ್ರಾರ್ಥನೆಯ ನಂತರ ಶಾಡೊ ಗ್ರಾಮದ ಗೊಂಪಾದಿಂದ ಹೊರಬರುತ್ತಿರುವುದು

ಶಾಡೊ ಗ್ರಾಮದ ನಂತರ, ಬೆಂಗಾವಲು ಪಡೆ ಹಾನ್ಲೆ ಕಣಿವೆಯ ಮತ್ತೊಂದು ಕುಗ್ರಾಮವಾದ ಪುಂಗುಕ್ ಅನ್ನು ತಲುಪುತ್ತದೆ. ಆ ಮಧ್ಯಾಹ್ನ ಮೆರವಣಿಗೆಯ ಆಗಮನಕ್ಕಾಗಿ ಗ್ರಾಮಸ್ಥರು ಕಾತುರದಿಂದ ಕಾಯುತ್ತಿದ್ದಾರೆ

ಮೆರವಣಿಗೆಯು ಪುಂಗುಕ್ ಗ್ರಾಮದ ಸ್ಥಳೀಯ ಗೊಂಪಾ ಕಡೆಗೆ ಹೋಗುತ್ತದೆ, ಅಲ್ಲಿ ನಿವಾಸಿಗಳು ಬಿಳಿ ಶಿರವಸ್ತ್ರ ಗಳೊಂದಿಗೆ ಅವರನ್ನು ಸ್ವಾಗತಿಸಲು ಕಾಯುತ್ತಿದ್ದಾರೆ

ಪುಂಗುಕ್ ಗೊಂಪಾ ಒಳಗೆ, ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಖಲ್ಡೋ ಗ್ರಾಮ ದಿಂದ ಬರಲಿರುವ ತಮ್ಮ ಸ್ನೇಹಿತ ರಿಗಾ ಗಿ ಕಾಯು ತ್ತಿರುವುದು

ಥ್ಯಾಂಕ್‌ಚೋಕ್ ದೋರ್ಜೆ ಮತ್ತು ಅವರ ಸ್ನೇಹಿತರು ಪುಂಗುಕ್ ಗೊಂಪಾ ಸಮುದಾಯ ಭವನದಲ್ಲಿ ಊಟವನ್ನು ಸೇವಿಸುತ್ತಿ ತ್ತಾ ಉಪ್ಪು ಚಹಾವನ್ನು ಕುಡಿಯುತ್ತಿದ್ದಾರೆ

ಈ ಊಟದ ನಂತರ, ಮೆರವಣಿಗೆಯು ಪುಂಗ್ಕುಕ್ ಹಳ್ಳಿಯನ್ನು ಸುತ್ತುತ್ತದೆ. ಒರಟಾದ ಭೂಪ್ರದೇಶ ಮತ್ತು ಗಾಳಿಯ ಹೊರತಾಗಿಯೂ ಗ್ರಾಮದ ಒಂದೇ ಒಂದು ಭಾಗವೂ ತಪ್ಪಿಹೋ ಗುವುದಿಲ್ಲ

ಮೆರವಣಿಗೆಯಲ್ಲಿ ಮಹಿಳೆಯರು ನಡೆಯುವಾಗ ಪವಿತ್ರ ಸುರುಳಿಗಳನ್ನು ತಮ್ಮ ಭುಜಗಳ ಮೇಲೆ ಒಯ್ಯುತ್ತಾರೆ

ನಾಗಾ ಬಸ್ತಿಗೆ ಹೋಗುವ ಮಾರ್ಗದಲ್ಲಿ, ಮೆರವಣಿಗೆ ಬಗ್ ಗ್ರಾಮದಲ್ಲಿ ನಿಲ್ಲುತ್ತದೆ, ಏಕೆಂದರೆ ನಿವಾಸಿಗಳು ಹಾ ನ್ಲೆ ಮಠದ ಲಾಮಾಗಳಿಂದ ಆಶೀರ್ವಾದ ಪಡೆಯಲು ಬರುತ್ತಾರೆ. ಅವರು ಮೆರವಣಿಗೆಯಲ್ಲಿ ಬಂದವರಿಗಾಗಿ ಉಪಾಹಾರವನ್ನು ಸಿದ್ಧಪಡಿಸಿದ್ದಾರೆ

ಬಗ್ ಗ್ರಾಮದ ನಿವಾಸಿಗಳು ಪವಿತ್ರ ಸುರುಳಿಗಳಿಂದ ಆಶೀರ್ವಾದ ಪಡೆಯುತ್ತಾರೆ

ತಮ್ಮ ದಾರಿಯಲ್ಲಿ ಪ್ರತಿಯೊಂದು ಹಳ್ಳಿಯನ್ನು ಪ್ರದಕ್ಷಿಣೆ ಹಾಕಿದ ನಂತರ, ಮೆರವಣಿಗೆ ಅಂತಿಮವಾಗಿ ನಾಗಾ ಬಳಿಯ ಸುಂದರವಾದ ಹುಲ್ಲುಗಾವಲಿನಲ್ಲಿ ನಿಲ್ಲುತ್ತದೆ. ಈ ಗ್ರಾಮದ ನಿವಾಸಿಗಳು ಟಿಬೆಟಿಯನ್ ಮೂಲದವರು. ಡೋಲುಗಳನ್ನು ಬಾರಿಸುವುದರೊಂದಿಗೆ, ಲಾಮಾಗಳು ಪ್ರಯಾಣ ಮುಗಿದಿರುವುದ ನ್ನು ಘೋಷಿಸುತ್ತಾರೆ
ಅನುವಾದ: ಶಂಕರ. ಎನ್. ಕೆಂಚನೂರು