PARI ಶಿಕ್ಷಕಿಯಾಗಿ ಗ್ರಾಮೀಣ ಭಾರತ ವಿಷಯವಾಗಿದ್ದರೆ ಅದು ನೈಜ ಶಿಕ್ಷಣ, ಸ್ಪಷ್ಟ ಮತ್ತು ಕೊನೆ ತನಕ ಉಳಿಯುವಂಥದ್ದು ಎಂಬುದನ್ನು ನಾವು ಕಂಡುಕೊಳ್ಳಬಹುದು.

ನಮ್ಮಲ್ಲಿ ತರಬೇತಿ ಪಡೆಯುತ್ತಿರುವ ಅಕ್ಷಯ್‌ ಮಂಗಲ್‌ ಅವರ ಅನುಭವವನ್ನೇ ತೆಗೆದುಕೊಳ್ಳೋಣ. ಇವರು ತಮ್ಮ ಸಮಯವನ್ನು ಪರಿಯೊಂದಿಗೆ ವಿನಿಯೋಗಿಸಿಕೊಂಡು ಛತ್ತೀಸ್‌ಗಢದ ಗ್ರಾಮೀಣ ಪ್ರದೇಶದಲ್ಲಿರುವ ಆದಿವಾಸಿಗಳು ಮತ್ತು ಸ್ಥಳೀಯ ನಾಟಿ ವೈದ್ಯರ (jhola chaap) ವೈದ್ಯಕೀಯ ಸೌಲಭ್ಯಗಳಿಂದ ಹೇಗೆ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅಧ್ಯಯನ ಮಾಡಿದರು. “ಖಾಸಗಿ ಮತ್ತು ಸಾರ್ವಜನಿಕ, ಮತ್ತು ಅರ್ಹ ಹಾಗೂ ಅನರ್ಹ ವೈದ್ಯರುಗಳ ನಡುವಿನ ಆಳವಾದ ಸಂಬಂಧ ಇರುವುದನ್ನು ಗಮನಿಸಿದೆ,” ಎಂದರು, ಅವರು ರಾಜ್ಯದ ಜಂಜ್‌ಗೀರ್‌ ಚಾಂಪ್‌ ಜಿಲ್ಲೆಗೆ ಸೇರಿದವರಾಗಿದ್ದು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು.

ತಮ್ಮ ಪಠ್ಯಪುಸ್ತಕದಲ್ಲಿ ಕಾಣಿಸಿಕೊಳ್ಳದ ಕಡೆಗಣಿಸಲ್ಪಟ್ಟ ಜನರ ಬದುಕಿನ ಬಗ್ಗೆಯೂ ಯುವ ಜನರು ಅಧ್ಯಯನ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿ ಶುಭಶ್ರೀ ಮಹಾಪಾತ್ರ ಅವರು  ಒಡಿಶಾದ ಕೋರಪತ್‌ನಲ್ಲಿ  ಗೌರಾ ಅವರಂಥ ದಿವ್ಯಾಂಗರು ಸರಕಾರದ ಸೌಲಭ್ಯಗಳನ್ನು ಪಡೆಯಲು ಪಡುತ್ತಿರುವ ಕಷ್ಟಗಳ ಬಗ್ಗೆ ವರದಿ ಮಾಡಿದ್ದು, “ ಗೌರಾಗೆ ಅಷ್ಟು ಭಾವುಕ ಮತ್ತು ದೈಹಿಕ ನೋವನ್ನು ನೀಡುವಂತೆ ಮಾಡಲು ಆಡಳಿತ ವ್ಯವಸ್ಥೆಯಲ್ಲಿನ ಕೊರತೆಯಾದರೂ ಏನು?” ಎಂದು ಪ್ರಶ್ನಿಸುವಂತೆ ಮಾಡಿದೆ.

ಪೀಪಲ್ಸ್‌ ಆರ್ಚಿವ್‌ ಆಫ್‌ ಇಂಡಿಯಾದ ಶಿಕ್ಷಣ ವಿಭಾಗ -PARI ಶಿಕ್ಷಣ ಐದನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ವರ್ಷಗಳಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಸಾಮಾಜಿಕ ಬದಲಾವಣೆಗಾಗಿ ಇರುವ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಯುವಜನರು ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಸಾಮಾನ್ಯ ಜನರಲ್ಲಿರುವ ಕೌಶಲ್ಯದ ವೈವಿಧ್ಯತೆ ಮತ್ತು ಜ್ಞಾನವನ್ನು ಆಳವಾಗಿ ಅರ್ಥೈಸಿಕೊಂಡರು. ಮಾಧ್ಯಮಿಕ ಶಾಲಾ ವಿದ್ಯಾರ್ಥಿ ಪ್ರಜ್ವಲ್‌ ಠಾಕೂರ್‌, ಛತ್ತೀಸ್‌ಗಢದ ರಾಯ್‌ಪುರದಲ್ಲಿ ಧಾನ್ಯ ಅಲಂಕಾರಿಕಗಳ (Dhan jhoomers) ನ್ನು ದಾಖಲೀಕರಿಸಿದ್ದು, “ಹಬ್ಬಗಳಲ್ಲಿ ರೈತರ ಪಾತ್ರ ಮತ್ತು ಭತ್ತದ ಪ್ರಾಮುಖ್ಯತೆಯ ಬಗ್ಗೆ ಜಾಗ್ರತನಾದೆ. PARI ಶಿಕ್ಷಣದೊಂದಿಗೆ ಕೆಲಸ ಮಾಡಿದುದರಿಂದ ನಾನು ಬದುಕುತ್ತಿರುವ ಸಮಾಜದಲ್ಲಿನ ಹೊಸ ಚಿತ್ರಣದ ಅರಿವಾಯಿತು," ಎಂದರು.

ವಿಡಿಯೋ ನೋಡಿ : ' ಪರಿ ಎಜುಕೇಷನ್‌ ಎಂದರೇನು ?'

ನೂರಾರು ಪ್ರದೇಶಗಳಿಂದ, ಶಾಲೆ ಮತ್ತು ವಿಶ್ವವಿದ್ಯಾನಿಲಯಗಳ ಸಂಶೋಧನಾ ಯೋಜನೆಗಳ ಮೂಲಕ ಅವರು ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.: ದೆಹಲಿಯಲ್ಲಿ ನಡೆದ ರೈತರ ಮುಷ್ಕರವನ್ನು ವರದಿ ಮಾಡುವುದು, ದೇಶದಲ್ಲಿರುವ ಕಡೆಗಣಿಸಲ್ಪಟ್ಟ ಜನರ ಮೇಲೆ ಕೋವಿಡ್‌-19 ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಕಂಡುಹಿಡಿಯುವುದು; ವಲಸೆ ಕಾರ್ಮಿಕರ ಪ್ರಯಾಣ ಮತ್ತುಅವರ ಬದುಕಿನ  ನಿರ್ಬಂಧಗಳ ಕುರಿತು ಅಧ್ಯಯನ ಮಾಡುವುದು.

ಕೊಚ್ಚಿಯ ಹಿನ್ನೀರಿನಲ್ಲಿ ವಾಸವಾಗಿದ್ದ ಕುಟುಂಬವೊಂದರ ಮನೆಗೆ ಹಿನ್ನೀರು ಹೊಕ್ಕಾಗ ಅವರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸುವುದನ್ನು ನೋಡಿ ಪತ್ರಿಕೋದ್ಯಮ ವಿದ್ಯಾರ್ಥಿ ಆದರ್ಶ್‌ ಬಿ. ಪ್ರದೀಪ್‌ ಅವರು ಮನೆಯನ್ನು ಏಕೆ ತೊರೆಯಬೇಕಾಯಿತು ಎಂಬುದನ್ನು ಮುಖ್ಯವಾಗಿರಿಸಿಕೊಂಡು ಉತ್ತಮ ವರದಿಯೊಂದನ್ನು ಸಿದ್ಧಪಡಿಸಿದರು. ಅವರ ಪ್ರಕಾರ, “PARIಯೊಂದಿಗೆ ಕೆಲಸ ಮಾಡಿದ್ದರಿಂದ ನನಗೆ ಹಲವಾರು ವಿಚಾರಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಯಿತು; ವರದಿ ಬಗ್ಗೆ ಹೆಚ್ಚಿನ ಗಮನಹರಿಸುವ ಸಲುವಾಗಿ  ಸರಕಾರದ ಮೂಲಗಳಿಂದ ನಂಬಲರ್ಹವಾದ ಅಂಕಿಅಂಶಗಳನ್ನು ಸಂಗ್ರಹಿಸುವುದು ಅದರಲ್ಲಿ ಪ್ರಮುಖವಾದುದು. ಇದೊಂದು ಕಲಿಕಾ ಅನುಭವ, ಆದರೆ ನಾನು ಸಂಶೋಧನೆ ನಡೆಸುತ್ತಿರುವ ಸಮುದಾಯಕ್ಕೆ ಹತ್ತಿರವಾಗುವಂತೆಯೂ ಮಾಡಿತು,”

ಕೇವಲ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕಡೆಗಣಿಸಲ್ಪಟ್ಟ ಜನರ ಬದುಕಿನ ಮೇಲಾದ ಪರಿಣಾಮಗಳ ವಿಷಯದ ಬಗ್ಗೆ ಬರೆದುದ್ದಲ್ಲ, ಅವರು ವರದಿಗಳನ್ನು ತಮ್ಮದೇ ಆದ ಭಾಷೆಯಲ್ಲಿ ಬರೆದಿದ್ದಾರೆ. ಮೂಲ ಹಿಂದಿ, ಒಡಿಯಾ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಬರೆದ ವರದಿಗಳನ್ನು ನಾವು ಪ್ರಕಟಿಸಿದ್ದೇವೆ. PARIಯಲ್ಲಿ ನಡೆದ ಕಾರ್ಯಗಾರದಲ್ಲಿ ಪಾಲ್ಗೊಂಡ ಪರಿಣಾಮ ಬಿಹಾರದ ಗಯಾ ಜಿಲ್ಲೆಯ ಸಿಂಪಲ್‌ ಕುಮಾರಿ ಮೋರಾ ಬಗ್ಗೆ ಹಿಂದಿಯಲ್ಲಿ ಬರೆದರು. ಇದು ದಲಿತ ಮಹಿಳೆಯೊಬ್ಬರ ಕುರಿತ ಸ್ಫೂರ್ತಿದಾಯಕ ವರದಿ. ಇದಲ್ಲದೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ವಿವಿಧ ಭಾಗಗಳ ಕೃಷಿಕರು, ವಾರ್ಡ್‌ ಕೌನ್ಸಿಲರ್‌ ಮತ್ತು ಆಶಾ ಕಾರ್ಯಕರ್ತೆಯರ ಬಗ್ಗೆಯೂ ವರದಿಯಾಗಿದೆ.

PHOTO • Antara Raman

ದೂರದ ಗ್ರಾಮೀಣ ಪ್ರದೇಶಗಳು ಮತ್ತು ನಗರ ಸಂಸ್ಥೆಗಳೆರಡರಲ್ಲೂ ಯುವ ಮನಸ್ಸುಗಳು ದೇಶಾದ್ಯಂತ 63ಕ್ಕೂ ಹೆಚ್ಚು ಸ್ಥಳಗಳಿಂದ ನಮಗಾಗಿ ವರದಿ ಮಾಡುತ್ತಿದ್ದಾರೆ ಮತ್ತು ದಾಖಲಿಸುತ್ತಿದ್ದಾರೆ

PARI Education ವೆಬ್‌ಸೈಟ್‌ನಲ್ಲಿ ಯುವ ಜನರು ಬರೆದ 200ಕ್ಕೂ ಹೆಚ್ಚು ವರದಿಗಳನ್ನು ಪ್ರಕಟಿಸಿದ್ದೇವೆ. ಮಾಧ್ಯಮಗಳಿಂದ ಕಡೆಗಣಿಸಲ್ಪಟ್ಟ ಸಾಮಾನ್ಯ ಜನರ ಬದುಕಿನ ಬಗ್ಗೆ ವರದಿ ಅಥವಾ ದಾಖಲೀಕರಣ ಮಾಡಿಲ್ಲ ಬದಲಾಗಿ, ಸಾಮಾಜಿ, ಆರ್ಥಿಕ ಮತ್ತು ಲಿಂಗ ಇವುಗಳ ನ್ಯಾಯದ ಕುರಿತೂ ವರದಿ ಮಾಡಿದ್ದಾರೆ.

ದೆಹಲಿಯಲ್ಲಿರುವ ಚಿಕ್ಕ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಬದುಕನ್ನು ಪರೀಕ್ಷಿಸಿದ ವಿದ್ಯಾರ್ಥಿ ಪ್ರವೀಣ್‌ ಕುಮಾರ್‌, ಅವರ ಪ್ರಕಾರ, “ಜನರ ಸಮಸ್ಯೆ ಎಂಬುದು ಕೇವಲ ವೈಯಕ್ತಿಕ ಅಥವಾ ಪ್ರತ್ಯೇಕಿಸಲ್ಪಟ್ಟಿದ್ದಲ್ಲ ಆದರೆ ಇದು ಸಮಾಜದ ಇತರರಿಗೂ ಸಂಬಂಧಿಸಿದ್ದು ಎಂಬುದನ್ನು ನಾನು ಅರಿತುಕೊಂಡೆ. ಒಬ್ಬ ವ್ಯಕ್ತಿ ತನ್ನ ಗ್ರಾಮವನ್ನು ತೊರೆದು ಕೆಲಸಕ್ಕಾಗಿ ನಗರವನ್ನು ಸೇರಿದನೆಂದರೆ ಆತನ ಕಾಳಜಿ ಇಡೀ ಸಮುದಾಯಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಸೇರಿದ್ದು,”

ಇತರರೊಂದಿಗೆ ಪರಿಶೋಧನೆ, ತೊಡಗಿಕೊಳ್ಳುವಿಕೆ ಮತ್ತು ಅನುಭೂತಿ ಇವುಗಳ ಮೂಲಕ ಕಲಿತಿರುವುದು ಸಮಾಜವನ್ನು ಅರ್ಥೈಸಿಕೊಳ್ಳುವಲ್ಲಿ ಸಹಾಯವಾಗುತ್ತದೆ. PARI ಶಿಕ್ಷಣ ಎಂಬುದು ಬದುಕಿನ ಶಿಕ್ಷಣವಿದ್ದಂತೆ. ತನ್ನ ವಿದ್ಯಾರ್ಥಿಗಳಿಗೆ ಸಂಬಂಧ ಕಲ್ಪಿಸುವಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರೇ ನಿಜವಾದ ಶಿಕ್ಷಕರು, PARI ಆ ಕೆಲಸವನ್ನು ಮಾಡುತ್ತಿದ್ದು, -ಗ್ರಾಮೀಣ ಭಾರತವನ್ನು ಯುವ ಭಾರತೀರಿಗೆ ಸಂಬಂಧ ಕಲ್ಪಿಸುತ್ತಿದೆ.

PARI ಎಜುಕೇಷನ್ ತಂಡವನ್ನು ಸಂಪರ್ಕಿಸಲು education@ruralindiaonline.org


ಮು ಖ್ಯ ಚಿತ್ರ: ಬಿನೈಫರ್ ಭರುಚಾ

ಅನುವಾದ: ಸೋಮಶೇಖರ್‌ ಪಡುಕರೆ

Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare