ʼಓಹ್, ಆ ಮನೇನಾ? ಅದೀಗ ಸಮುದ್ರದಲ್ಲಿದೆ – ಅಗೋ ಅಲ್ಲಿ!ʼ
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಡ ಗ್ರಾಮದ ನಿವಾಸಿಗಳು ಮುಂದಿನ ಸರದಿಯಾಗಿ ಸಮುದ್ರ ಏನನ್ನು ತನ್ನ ಒಡಲೊಳಗೆ ಸೇರಿಸಿಕೊಳ್ಳಲಿದೆ ಎನ್ನುವುದನ್ನು ಹೇಳಲು ಅದರ ನಡತೆಯನ್ನು ಅನುಸರಿಸುತ್ತಾರೆ. ದಿನದಿನವೂ ಕರಗುತ್ತಿರುವ ಆ ಊರಿನ ಕಡಲ ತೀರವು ಅವರ ಜೀವನೋಪಾಯಗಳು, ಸಾಮಾಜಿಕ ಸಂಬಂಧಗಳು ಮತ್ತು ಸಮುದಾಯಿಕ ನೆನಪುಗಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರಿದೆ
ಫೆಬ್ರವರಿ 28, 2022 | ರಾಹುಲ್ ಎಂ.
ಹವಾಮಾನ ಬದಲಾವಣೆಯ ಯುದ್ಧದಲ್ಲಿ ಕೀಟಗಳ ಹೋರಾಟ
ಭಾರತದಲ್ಲಿನ ಸ್ಥಳೀಯ ಕೀಟ ಪ್ರಭೇದಗಳು ಬಹಳ ವೇಗವಾಗಿ ನಿರ್ನಾಮವಾಗುತ್ತಿವೆ - ಮತ್ತು ಇವುಗಳಲ್ಲಿ ಹಲವು ನಮ್ಮ ಆಹಾರ ಸುರಕ್ಷತೆಯೊಂದಿಗೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿವೆ. ಆದರೆ ಈ ಕೀಟಗಳ ಕುರಿತು ಮನುಷ್ಯ ಸಾಕುಪ್ರಾಣಿಗಳ ಮೇಲೆ ತೋರಿಸುವಂತಹ ಅಕ್ಕರೆಯನ್ನು ತೋರಿಸುವಂತೆ ಮಾಡುವುದು ಬಹಳ ಕಷ್ಟದ ಕೆಲಸ
ಸೆಪ್ಟೆಂಬರ್ 22, 2020 | ಪ್ರೀತಿ ಡೇವಿಡ್
ಲಕ್ಷದ್ವೀಪದಲ್ಲಿ ಕ್ಷೀಣಿಸುತ್ತಿರುವ ಹವಳದ ಬಂಡೆಗಳು
ಇದು ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಭೂಪ್ರದೇಶ, ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 1-2 ಮೀಟರ್ ಎತ್ತರದಲ್ಲಿದೆ - ಮತ್ತು ಇಲ್ಲಿನ ಪ್ರತಿ ಏಳನೇ ವ್ಯಕ್ತಿಯು ಮೀನುಗಾರನಾಗಿದ್ದರೆ - ಇದು ತನ್ನ ಹವಳದ ಬಂಡೆಗಳನ್ನು ಕಳೆದುಕೊಳ್ಳುತ್ತಿದೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನೇಕ ಹಂತಗಳಲ್ಲಿ ಅನುಭವಿಸುತ್ತಿದೆ
ಸೆಪ್ಟೆಂಬರ್ 12, 2020 | ಶ್ವೇತಾ ಡಾಗಾ
ಥಾಣೆಯಲ್ಲಿ ದುಷ್ಟನಂತಾಗಿರುವ ಮಳೆ
ಮಹಾರಾಷ್ಟ್ರದ ಶಹಾಪುರ ತಾಲ್ಲೂಕಿನ ಬುಡಕಟ್ಟು ಗ್ರಾಮದ ಧರ್ಮ ಗರೇಲ್ ಮತ್ತು ಇತರರು 'ಹವಾಮಾನ ಬದಲಾವಣೆ' ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರು ಅದರ ನೇರ ಪರಿಣಾಮಗಳಾದ ಅನಿಯಮಿತ ಮಳೆ ಮತ್ತು ಇಳುವರಿ ಕುಸಿತದ ಪರಿಣಾಮವನ್ನು ಎದುರಿಸುತ್ತಿದ್ದಾರೆ
ಆಗಸ್ಟ್ 25, 2020 | ಜ್ಯೋತಿ ಶಿನೋಲಿ
ಚುರೂ: ಒಮ್ಮೆ ವಿಪರೀತ ಚಳಿ, ಒಮ್ಮೆ ಬಿರುಬಿಸಿಲು - ಮುಖ್ಯವಾಗಿ ಬಿಸಿಲು
ಜೂನ್ 2019ರಲ್ಲಿ ರಾಜಸ್ಥಾನದ ಚುರೂ ವಿಶ್ವಮಟ್ಟದಲ್ಲಿ ದಾಖಲೆಯ 51° ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿತ್ತು. ಇಲ್ಲಿನ ಸಾಕಷ್ಟು ಜನರು ಇದನ್ನು ವಿಸ್ತರಿಸುತ್ತಿರುವ ಸೆಕೆಗಾಲದ ಒಂದು ಮೈಲಿಗಲ್ಲಷ್ಟೇ ಎಂದು ಭಾವಿಸಿದರು. ಮತ್ತೆ ಉಳಿದವರು ತಾಪಮಾನದಲ್ಲಿನ ಈ ರೀತಿಯ ಬದಲಾವಣೆಗೆ ಹವಮಾನ ಬದಲಾವಣೆ ಕಾರಣವೆಂದು ಸ್ಪಷ್ಟವಾಗಿ ಗುರುತಿಸಿದ್ದರು
ಜೂನ್ 02, 2020 | ಶರ್ಮಿಳಾ ಜೋಶಿ
"ಯಮುನೆಯ ಸತ್ತ ಮೀನುಗಳೇ ತಾಜಾ ಮೀನುಗಳು"
ಹೊರಸೂಸುತ್ತಿರುವ ಮಾಲಿನ್ಯ ಹಾಗೂ ಉದಾಸೀನತೆಯಿಂದಾಗಿ ದೆಹಲಿಯ ಜೀವನಾಡಿಯು ಕೊಚ್ಚೆಯಂತಾಗಿದೆ. ಪ್ರತಿ ವರ್ಷವೂ ಸಾವಿರಾರು ಮೀನುಗಳು ಸಾವಿಗೀಡಾಗುತ್ತಿದ್ದು, ಯಮುನೆಯ ಅಸಲಿ ಸಂರಕ್ಷಕರೆನಿಸಿದ ಈ ಮೀನುಗಳಿಗೆ ಎಲ್ಲಿಯೂ ತಾಣವಿಲ್ಲವಾಗಿದೆ. ಹವಾಮಾನ ಬಿಕ್ಕಟ್ಟಿನ ಉತ್ತೇಜನಕ್ಕೆ ಈ ಎಲ್ಲ ಅಂಶಗಳೂ ಕಾರಣಗಳಾಗುತ್ತಿವೆ
ಜನವರಿ 22, 2020 | ಶಾಲಿನಿ ಸಿಂಗ್
ದೊಡ್ಡ ನಗರ, ಚಿಕ್ಕ ರೈತರು ಹಾಗೂ ಅವಸಾನದಂಚಿನಲ್ಲಿರುವ ನದಿ
ನಗರದ ರೈತರು? ಒಂದು ರೀತಿಯಲ್ಲಿ ಹೌದು. ರಾಷ್ಟ್ರೀಯ ರಾಜಧಾನಿಯಲ್ಲಿ ಉಸಿರುಗಟ್ಟಿದಂತಿರುವ ಯಮುನಾ ನದಿ ಹಾಗೂ ಸರ್ವನಾಶಕ್ಕೀಡಾಗಿರುವ ಅದರ ಮುಳುಗು ಪ್ರದೇಶಗಳು, ಅಲ್ಲಿನ ಹವಾಮಾನದ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದ್ದು ಜನರ ಜೀವನೋಪಾಯವನ್ನು ಹಾಳುಗೆಡವಿದೆ
ಡಿಸೆಂಬರ್ 19, 2019 | ಶಾಲಿನಿ ಸಿಂಗ್
ಆಕುಂಚನಗೊಳ್ಳುತ್ತಿರುವ ಮುಂಬೈ ಉಪನಗರದ ಮಂಜಿ ಮೀನು (ಪೊಂಫ್ರೆಟ್)
ವರ್ಸೊವ ಕೊಲಿವಾಡದ ಅನೇಕರಲ್ಲಿ, ಕ್ಷೀಣಿಸುತ್ತಿರುವ ಮೀನನ್ನು ಕುರಿತೊಂದು ಕಥಾನಕವಿದೆ. ಸ್ಥಳೀಯವಾಗಿ ಕಂಡುಬರುತ್ತಿರುವ ಮಾಲಿನ್ಯದಿಂದ ಪ್ರಾರಂಭಗೊಂಡು ಜಾಗತಿಕ ಮಟ್ಟದ ತಾಪಮಾನದವರೆಗಿನ ಅನೇಕ ಕಾರಣಗಳು ಇದರ ಹಿನ್ನೆಲೆಯಲ್ಲಿವೆ. ಈ ಎರಡೂ ಅಂಶಗಳಿಂದಾಗಿ ಮುಂಬೈ ತೀರದಲ್ಲಿ ಹವಾಮಾನ ಬದಲಾವಣೆಯಂತಹ ಮಹತ್ತರ ಪರಿಣಾಮಗಳುಂಟಾಗುತ್ತಿವೆ
ಡಿಸೆಂಬರ್ 4, 2019 | ಸುಬುಹಿ ಜಿವಾನಿ
"ಪ್ರಕ್ಷುಬ್ಧ ಸಾಗರಗಳಲ್ಲಿ, ತಮಿಳು ನಾಡಿನ ಸಮುದ್ರದ ಜೊಂಡಿನ (Seaweed) ಸಂಗ್ರಾಹಕರು"
ತಮಿಳುನಾಡಿನ ಭಾರತಿನಗರದ ಬೆಸ್ತ ಮಹಿಳೆಯರು ತಮ್ಮ ಅಸಾಧಾರಣವೆನಿಸುವ ಚಟುವಟಿಕೆಗಳಿಂದಾಗಿ, ದೋಣಿಗಳಿಗಿಂತಲೂ ನೀರಿನಲ್ಲಿರುವುದೇ ಹೆಚ್ಚು. ಆದರೆ ಹವಾಮಾನ ಬದಲಾವಣೆ ಮತ್ತು ಕಡಲಿನ ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಇವರ ಜೀವನೋಪಾಯವು ಸಂಕಷ್ಟಕ್ಕೀಡಾಗಿದೆ
ಅಕ್ಟೋಬರ್ 31, 2019 | ಎಂ.ಪಳನಿ ಕುಮಾರ್
ಮಳೆಯ ವಿಳಂಬದಿಂದಾಗಿ ಸಂಕಷ್ಟಕ್ಕೀಡಾಗಿರುವ ಭಂಡಾರದ ರೈತರು
ಬಹಳ ಹಿಂದಿನಿಂದಲೂ ಸಾಕಷ್ಟು ನೀರಿನ ಸಂಪನ್ಮೂಲವಿದ್ದ ವಿದರ್ಭದಲ್ಲಿನ ಈ ಜಿಲ್ಲೆಯಲ್ಲೀಗ ಮಳೆಯ ಸ್ವರೂಪದಲ್ಲ್ಲಿ ಬದಲಾವಣೆಗಳಾಗುತ್ತಿವೆ. ಹವಾಮಾನವನ್ನು ಕುರಿತಂತೆ ‘ಅಪಾಯಕಾರಿ’ಪ್ರದೇಶವೆಂಬುದಾಗಿ ಗುರುತಿಸಲ್ಪಟ್ಟ ಭಂಡಾರದಲ್ಲಿನ ಬದಲಾವಣೆಗಳಿಂದಾಗಿ, ಭತ್ತದ ಬೆಳೆಗಾರರು ಅನಿಶ್ಚಿತ ಸ್ಥಿತಿಯಲ್ಲಿದ್ದು ನಷ್ಟವನ್ನೂ ಅನುಭವಿಸುತ್ತಿದ್ದಾರೆ
ಅಕ್ಟೋಬರ್ 23, 2019 | ಜೈದೀಪ್ ಹರ್ಡೀಕರ್
ʼಹತ್ತಿ ಈಗ ತಲೆನೋವಾಗಿ ಪರಿಣಮಿಸಿದೆʼ
ಒರಿಸ್ಸಾದ ರಾಯಗಡ ಜಿಲ್ಲೆಯಾದ್ಯಂತ ಹಬ್ಬಿರುವ ವಿಪರೀತ ರಾಸಾಯನಿಕ ಬಳಕೆಯ ಏಕಬೆಳೆ ಸಂಸ್ಕೃತಿಯ ಬಿಟಿ ಹತ್ತಿಯು ಆರೋಗ್ಯವನ್ನು ಹದಗೆಡಿಸುತ್ತಿದೆ, ಸಾಲದಲ್ಲಿ ಮುಳುಗಿಸುತ್ತಿದೆ, ಮತ್ತೆ ಸಿಗದಂತೆ ದೇಸೀ ತಿಳಿವಳಿಕೆಯನ್ನು ತಿಂದುಹಾಕುತ್ತಿದೆ, ಮತ್ತು ಹವಾಗುಣ ವಿಷಮತೆಯ ಬೀಜಗಳನ್ನು ಬಿತ್ತುತ್ತಿದೆ
ಅಕ್ಟೋಬರ್ 7, 2019 | ಅನಿಕೇತ್ ಆಗಾ ಮತ್ತು ಚಿತ್ರಾಂಗದಾ ಚೌಧರಿ
"ಒಡಿಶಾದಲ್ಲಿ ಹವಾಮಾನ ಬಿಕ್ಕಟ್ಟಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ"
ರಾಯಗಡದ ಬಿಟಿ ಹತ್ತಿಯ ಒಟ್ಟು ಎಕರೆಯ ಮೊತ್ತ ಹದಿನಾರು ವರ್ಷಗಳಲ್ಲಿ ಶೇ. 5,200 ರಷ್ಟು ಏರಿಕೆಯಾಗಿದೆ. ಸ್ಥಳೀಯ ಆಹಾರ ಧಾನ್ಯಗಳು, ಅಕ್ಕಿಯ ವಿವಿಧ ಪ್ರಕಾರಗಳು ಹಾಗೂ ಅರಣ್ಯದ ಆಹಾರೋತ್ಪನ್ನಗಳು ಯಥೇಚ್ಛವಾಗಿದ್ದು ಜೀವವೈವಿಧ್ಯವನ್ನುಳ್ಳ ಈ ಸಂವೇದನಾಶೀಲ ಪ್ರದೇಶದ ಪರಿಸರದಲ್ಲಿನ ಬದಲಾವಣೆಗಳು ಆಪತ್ತಿನ ಪೂರ್ವಸಂಕೇತಗಳಾಗಿವೆ
ಅಕ್ಟೋಬರ್ 4, 2019 | ಚಿತ್ರಾಂಗದಾ ಚೌಧರಿ ಮತ್ತು ಅನಿಕೇತ್ ಆಗಾ
‘ಗುಜರಾತಿನ ಹುಲ್ಲುಗಾವಲುಗಳು ಕ್ಷೀಣಿಸುತ್ತಿದ್ದು, ಕುರಿಗಳನ್ನು ಎಣಿಸಿನೋಡುವಂತಾಗಿದೆ’
ಗುಜರಾತಿನ ಕಛ್ ಪ್ರದೇಶದಲ್ಲಿನ ಪಶುಪಾಲಕರು, ತಮ್ಮ ಕುರಿಗಳಿಗೆ ಮೇವುಮಾಳಗಳನ್ನು ಹುಡುಕಿಕೊಂಡು ಬಹುದೂರದವರೆಗೂ ಸಾಗುತ್ತಿದ್ದಾರೆ. ಹುಲ್ಲುಗಾವಲುಗಳು ಕಣ್ಮರೆಯಾಗುತ್ತಿದ್ದು ದುರ್ಲಭವಾಗುತ್ತಿವೆ. ಹವಾಮಾನದ ಸ್ವರೂಪದಲ್ಲಿ ಮತ್ತಷ್ಟು ಅನಿಯಮಿತ ಬದಲಾವಣೆಗಳಾಗುತ್ತಿವೆ
ಸೆಪ್ಟೆಂಬರ್ 23, 2019 | ನಮಿತಾ ವಾಯ್ಕರ್
ಸುಂದರ್ಬನ್: ‘ಹುಲ್ಲಿನ ಒಂದು ಎಸಳೂ ಸಹ ಇಲ್ಲಿ ಬೆಳೆಯಲಿಲ್ಲ...’
ಪಶ್ಚಿಮ ಬಂಗಾಳದ ಸುಂದರ್ಬನ್ ಪ್ರದೇಶದಲ್ಲಿ ಬಹಳ ಕಾಲದಿಂದಲೂ ಬಡತನದಲ್ಲಿಯೇ ಜೀವಿಸುತ್ತಿರುವ ಜನರೀಗ ಪುನರಾವರ್ತಿತ ಚಂಡಮಾರುತಗಳು, ಅನಿಯಮಿತ ಮಳೆ, ಕ್ಷಾರತೆ ಹಾಗೂ ತಾಪಮಾನದಲ್ಲಿನ ಹೆಚ್ಚಳ, ಬರಿದಾಗುತ್ತಿರುವ ಮ್ಯಾಂಗ್ರೋವ್ ಕಾಡುಗಳು ಮುಂತಾದ ಹವಾಮಾನದ ಬದಲಾವಣೆಗಳನ್ನು ಎದುರಿಸುತ್ತಿದ್ದಾರೆ
ಸೆಪ್ಟೆಂಬರ್ 10, 2019 | ಊರ್ವಶಿ ಸರ್ಕಾರ್
‘ಸಂತೋಷದ ದಿನಗಳು ಈಗ ಕೇವಲ ನೆನಪುಗಳಷ್ಟೇ.’
ಅರುಣಾಚಲ ಪ್ರದೇಶದ ಪೂರ್ವ ಹಿಮಾಲಯದಲ್ಲಿನ ಎತ್ತರ ಪ್ರದೇಶಗಳಲ್ಲಿನ ಬ್ರೊಕ್ಪ ಅಲೆಮಾರಿ ಸಮುದಾಯವು ಹವಾಮಾನದಲ್ಲಿನ ಬದಲಾವಣೆಗಳನ್ನು ಗುರುತಿಸುತ್ತಿದ್ದು, ಸಾಂಪ್ರದಾಯಿಕ ಜ್ಞಾನದ ಆಧಾರದಲ್ಲಿ ಈ ಸಮಸ್ಯೆಯನ್ನು ನಿಭಾಯಿಸುವತ್ತ ಕಾರ್ಯನೀತಿಗಳನ್ನು ರೂಪಿಸುತ್ತಿದೆ
ಸೆಪ್ಟೆಂಬರ್ 2, 2019 | ರಿತಾಯನ್ ಮುಖರ್ಜಿ
43 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿನ ಆಲಿಕಲ್ಲು ಮಳೆಯಿಂದಾಗಿ ಧ್ವಂಸಗೊಂಡ ಲಾತೂರಿನ ಕೃಷಿ
ಕಳೆದ ಒಂದು ದಶಕದಿಂದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಗ್ರಾಮೀಣರು, ಬೇಸಿಗೆಯಲ್ಲಿನ ಭಾರಿ ಹಾಗೂ ತೀಕ್ಷ್ಣ ಸ್ವರೂಪದ ಆಲಿಕಲ್ಲು ಮಳೆಯಿಂದಾಗಿ ದಿಗ್ಬ್ರಾಂತರಾಗಿದ್ದಾರೆ. ಕೆಲವು ರೈತರು ತಮ್ಮ ತೋಟಗಳನ್ನು ಸಂಪೂರ್ಣವಾಗಿ ತೊರೆಯುತ್ತಿದ್ದಾರೆ
ಆಗಸ್ಟ್ 26, 2019 | ಪಾರ್ಥ ಎಂ.ಎನ್.
'ಸಂಗೊಲ್ ನಲ್ಲಿ ಎಲ್ಲವೂ ಬುಡಮೇಲಾಗಿದೆ'
ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಸಂಗೊಲ್ ತಾಲ್ಲೂಕಿನ ಹಳ್ಳಿಗಳಲ್ಲಿ ಈ ಹಿಂದಿನ ಸಮೃದ್ಧ ಮಳೆ ಹಾಗೂ ಒಣ ಹವೆಯ ಆವರ್ತನೀಯ ಜಾಲವು ಬುಡಮೇಲಾಗಿರುವುದನ್ನು ಕುರಿತ ಸುದ್ದಿಗಳು ಅಸಂಖ್ಯಾತವಾಗಿವೆ. ಇದರ ಕಾರಣ ಹಾಗೂ ಪರಿಣಾಮಗಳನ್ನು ಕುರಿತ ಒಂದು ವಿಶ್ಲೇಷಣೆಯಿದು
ಆಗಸ್ಟ್ 19, 2019 | ಮೇಧಾ ಕಾಳೆ
‘ಆ ಮೀನುಗಳನ್ನು ನಾವಿಂದು ಡಿಸ್ಕವರಿ ಛಾನಲ್‍ನಲ್ಲಿ ಹುಡುಕುತ್ತಿದ್ದೇವೆ’
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್ ದ್ವೀಪದ ಮೀನುಗಾರರಿಂದ, ಮೀನುಗಾರರಿಗೆಂದು ಪ್ರಾರಂಭಿಸಲಾದ ಸಾಮುದಾಯಿಕ ರೇಡಿಯೋ ಕಡಲ್ ಒಸಯ್, ಈ ವಾರ ಮೂರು ವರ್ಷಗಳನ್ನು ಪೂರೈಸುತ್ತಿದೆ. ಇತ್ತೀಚೆಗೆ ಹವಾಮಾನ ಬದಲಾವಣೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಈ ರೇಡಿಯೋ, ಮಹತ್ತರ ಪರಿಣಾಮವನ್ನು ಬೀರುತ್ತಿದೆ
ಆಗಸ್ಟ್ 12, 2019 | ಕವಿತಾ ಮುರಳೀಧರನ್
"ಹವಾಗುಣವು ಹೀಗೇಕೆ ಬದಲಾಗುತ್ತಿದೆ?"
ಹಿಂದೊಮ್ಮೆ ವಯನಾಡ್ ಮತ್ತು ಕೇರಳದ ಜನರು ಜಿಲ್ಲೆಯ ‘ಹವಾನಿಯಂತ್ರಿತ ವಾಯುಗುಣ’ದ ಬಗ್ಗೆ ಹೆಮ್ಮೆಪಡುತ್ತಿದ್ದರು. ಆದರೆ ಈಗ, ಇಲ್ಲಿನ ಕಾಫಿ ಮತ್ತು ಮೆಣಸು ಬೆಳೆಗಾರರು ತಾಪಮಾನದ ಹೆಚ್ಚಳ ಮತ್ತು ಅನಿಯಮಿತವಾಗಿ ಸುರಿಯುವ ಮಳೆಯಿಂದ ಉಂಟಾಗುತ್ತಿರುವ ನಷ್ಟದಿಂದಾಗಿ ತಲ್ಲಣಗೊಂಡಿದ್ದಾರೆ
ಆಗಸ್ಟ್ 5, 2019 | ವಿಶಾಖ ಜಾರ್ಜ್
‘ನಾವು ಬಹುಶಃ ಪರ್ವತ ದೇವರನ್ನು ಸಿಟ್ಟಿಗೆಬ್ಬಿಸಿದ್ದೇವೆ’
ಪರ್ವತಗಳಿಂದಾವೃತವಾದ ಸೂಕ್ಷ್ಮ ಪರಿಸರ ವ್ಯವಸ್ಥೆಗಳ ಹವಾಮಾನದಲ್ಲಿನ ಗಂಭೀರತಮ ವ್ಯತ್ಯಾಸಗಳಿಂದಾಗಿ, ಲಡಾಖಿನ ಎತ್ತರದ ಹುಲ್ಲುಗಾವಲುಗಳ ಅಲೆಮಾರಿಗಳಾದ ಛಂಗ್ಪ ಪಶುಪಾಲಕರ, ಯಾಕ್-ಸಂಬಂಧಿತ ಅರ್ಥವ್ಯವಸ್ಥೆಯು ಆಪತ್ತಿಗೆ ಸಿಲುಕಿದೆ
ಜುಲೈ 22, 2019 | ರಿತಾಯನ್ ಮುಖರ್ಜಿ
ಕೊಲ್ಹಾಪುರದ ಹವಾಗುಣದಿಂದ ಸಂಕಷ್ಟಕ್ಕೀಡಾದ ಕಾಡೆಮ್ಮೆಗಳು
ಕೊಲ್ಹಾಪುರದ ರಾಧಾನಗರಿಯಲ್ಲಿ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷವು ತೀವ್ರಗೊಳ್ಳುತ್ತಿದ್ದು, ಗೌರ್ ಎಮ್ಮೆಕೋಣಗಳು ಹತ್ತಿರದ ಕೃಷಿ ಕ್ಷೇತ್ರಗಳಿಗೆ ದಾಳಿಯಿಡುತ್ತಿವೆ. ಅರಣ್ಯನಾಶ, ಫಸಲಿನ ಬದಲಾವಣೆ, ಬರ, ಹವಾಮಾನದ ಸ್ವರೂಪದಲ್ಲಿನ ಏರುಪೇರುಗಳಿಂದಾಗಿ ಈ ಪ್ರವೃತ್ತಿಯು ಹೆಚ್ಚುತ್ತಿದೆ
ಜುಲೈ 17, 2019 | ಸಂಕೇತ್ ಜೈನ್
ರಾಯಲಸೀಮಾದಲ್ಲಾಗುತ್ತಿರುವ ಮರಳಮಳೆ
ಬೆಳೆಮಾದರಿ ಬದಲಾವಣೆಗಳು, ಕ್ಷೀಣಿಸುತ್ತಿರುವ ಅರಣ್ಯಪ್ರದೇಶ, ಕೊಳವೆಬಾವಿಗಳ ಸಂಖ್ಯೆಗಳಲ್ಲಾಗುತ್ತಿರುವ ತೀವ್ರ ಏರಿಕೆ, ನದಿಯೊಂದರ ಅಂತ್ಯ - ಹೀಗೆ ಇವೆಲ್ಲವುಗಳೂ ಕೂಡ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಭೂಮಿ, ಗಾಳಿ, ನೀರು ಮತ್ತು ಹವಾಮಾನಗಳಲ್ಲಿ ವಿಪರೀತ ಬದಲಾವಣೆಗಳನ್ನು ತಂದಿವೆ
ಜುಲೈ 8, 2019 | ಪಿ.ಸಾಯಿನಾಥ್