ಕಳೆದ ವರ್ಷದ ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ, ಡೇರೆಯಿಂದ ಸುತ್ತುವರಿದ ವನ್ಯಜೀವಿ ಶಿಬಿರದ ಪ್ರಶಾಂತ ಪರಿಸರದಲ್ಲಿ, ಗೊಂಡ್ ಕಲಾವಿದ ಮಿಥಿಲೇಶ್ ಕುಮಾರ್ ಶ್ಯಾಮ್ ತನ್ನ ವರ್ಣರಂಜಿತ ವರ್ಣಚಿತ್ರಗಳನ್ನು ದೊಡ್ಡ ಮೇಜಿನ ಮೇಲೆ ಹರಡಿದರು. ಪಠಾಣಗಢದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿಯ ಬಮ್ನಿ ಗ್ರಾಮದ ಶಿಬಿರಕ್ಕೆ ಅವರು ತಮ್ಮ ಕುಟುಂಬದ ಹಳೆಯ ಕಾರಿನಲ್ಲಿ ಆ ಬೆಳಿಗ್ಗೆ ಬಂದಿದ್ದರು.

ಮರ, ಹಕ್ಕಿ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಒಂದು ಕಡೆಯಾದರೆ ಗೊಂಡ ಸಮುದಾಯದ ಸಂಗ್ರಹಿತ ಪುರಾಣಗಳು ಮತ್ತೊಂದೆಡೆ. ಆಧುನಿಕ ವಾಸ್ತವತೆಯ ಅದ್ಭುತ ವಿವರವಾದ ಚಿತ್ರಣಗಳೂ ಅವರ ಚಿತ್ರಕಲೆಯಲ್ಲಿ ಸೇರಿವೆ. "ಕೆಲವೊಮ್ಮೆ ನಾನು ನಮ್ಮ ಜಾನಪದದಿಂದ ಪ್ರೇರಿತನಾಗಿ ಚಿತ್ರ ಬಿಡಿಸುತ್ತೇನೆ. ನನ್ನ ಕಲ್ಪನೆಯ ಪ್ರಕಾರ, ಬನಾರುಪಿ (ಮೂರು ತಂತಿಗಳ ಪಿಟೀಲು) ನಮ್ಮ ಮುಖ್ಯ ದೇವತೆ ಬಾರಾ ದೇವನನ್ನು ('ಮಹಾನ್ ದೇವರು') ಚಿತ್ರಿಸುತ್ತದೆ." ಕೆಲವೊಮ್ಮೆ ದೈನಂದಿನ ಜೀವನದ ಸಮಕಾಲೀನ ಘಟನೆಗಳು ನನ್ನನ್ನು ಚಿತ್ರ ಬಿಡಿಸಲು ಪ್ರೇರೇಪಿಸುತ್ತವೆ. ನಾನು ನೋಡಿದ ವಿಷಯಗಳು, ನನ್ನ ಕಲ್ಪನೆ ಅಥವಾ ಕನಸನ್ನು ಸಹ ನಾನು ಚಿತ್ರಿಸುತ್ತೇನೆ," ಎಂದು 27 ವರ್ಷದ ಮಿಥಿಲೇಶ್ ಹೇಳುತ್ತಾರೆ.

ಮತ್ತು ಎಲ್ಲಾ ಗೊಂಡ್ ಕಲಾವಿದರಂತೆ, ಮಿಥಿಲೇಶ್ ಪ್ರತಿ ಚಿತ್ರವನ್ನು ವಿಶಿಷ್ಟ ವಿನ್ಯಾಸಗಳಿಂದ ತುಂಬುವ ವಿಧಾನವನ್ನು ಹೊಂದಿದ್ದಾರೆ - ಸಣ್ಣ ಸರಳ ರೇಖೆಗಳು, ಚುಕ್ಕೆಗಳು ಮತ್ತು ವಕ್ರರೇಖೆಗಳು ಚಿತ್ರದ ದೊಡ್ಡ ಆಕಾರಗಳನ್ನು ತುಂಬುತ್ತವೆ. ಹಬ್ಬದ ಸಮಯದಲ್ಲಿ, ಅವರ ಮಣ್ಣಿನ ಮನೆಗಳ ಗೋಡೆಗಳನ್ನು ವಿವಿಧ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ – ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ ಎಂದು ಅವರು ಹೇಳುತ್ತಾರೆ. ಅವರ ದೇವತೆಗಳ ಚಿತ್ರಗಳು, ನೀತಿಕಥೆಗಳು, ಗೋಡೆಗಳನ್ನು ಅಲಂಕರಿಸಿದ ಪುರಾಣಗಳನ್ನು ಗೊಂಡ್ ಬಿತ್ತಿ ಚಿತ್ರಗಳು ಎಂದು ಕರೆಯಲಾಗುತ್ತದೆ. "ಇದಕ್ಕಾಗಿ ನಾವು ಬಳಸುವ ಬಣ್ಣಗಳು ನೈಸರ್ಗಿಕ ಉತ್ಪನ್ನಗಳಿಂದ ಬರುತ್ತವೆ - ಹಸಿರು, ಚೆಂಡು ಹೂವಿನಿಂದ ಕಿತ್ತಳೆ, ಸೂರ್ಯಕಾಂತಿಯಿಂದ ಹಳದಿ, ಹಸುವಿನ ಸಗಣಿಯಿಂದ ಖೈರಿ, ಚುಹಿ [ಒಣಹುಲ್ಲಿನ ಮಣ್ಣಿನಿಂದ] ಬಿಳಿ, ಮಣ್ಣಿನಿಂದ ಕಪ್ಪು, ಇತ್ಯಾದಿ.

Mithlesh Kumar Shyam at the wildlife camp where he occasionally displays and sells his paintings. Like other Gond artists, he too has a distinctive style
PHOTO • Anne Pinto-Rodrigues
PHOTO • Mithlesh Kumar Shyam

ವನ್ಯಜೀವಿ ಶಿಬಿರದಲ್ಲಿ ಮಿಥಿಲೇಶ್ ಕುಮಾರ್ ಶ್ಯಾಮ್ ಅವರು ಸಾಂದರ್ಭಿಕವಾಗಿ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಇತರ ಗೊಂಡ್ ಕಲಾವಿದರಂತೆ, ಅವರೂ ಸಹ ವಿಶಿಷ್ಟ ಶೈಲಿಯನ್ನು ಹೊಂದಿದ್ದಾನೆ

ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿರುವ ಗೊಂಡರು ಮಧ್ಯ ಭಾರತದ ವಿವಿಧ ರಾಜ್ಯಗಳಾದ ಛತ್ತೀಸ್ ಗಢ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. "ನಾವು ಗೊಂಡ್ [ಅನಿಮಿಸ್ಟ್] ಮತ್ತು ಹಿಂದೂ ಹಬ್ಬಗಳೆರಡನ್ನೂ ಆಚರಿಸುತ್ತೇವೆ" ಎಂದು ಮಿಥಿಲೇಶ್ ಹೇಳುತ್ತಾರೆ. "ಆಗಸ್ಟ್ ತಿಂಗಳಿನಲ್ಲಿ ಹರ್ಯಾಲಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸಲು; ಸುಗ್ಗಿಯನ್ನು ಆಚರಿಸಲು ಸೆಪ್ಟೆಂಬರ್ ತಿಂಗಳಿನಲ್ಲಿ ನವ ಖವಾಯಿಯೆ; ವಸಂತಕಾಲದಲ್ಲಿ ಹೋಳಿ; ಮತ್ತು ವರ್ಷದ ಕೊನೆಯಲ್ಲಿ ದೀಪಾವಳಿ. ಇವು ನಮ್ಮ ಹಬ್ಬಗಳು."

ಮಿಥಿಲೇಶ್ ಮತ್ತು ಅವರ ಕುಟುಂಬವು ಗೊಂಡ ಸಮುದಾಯದ ಪರ್ಧನ್ ಉಪ-ಗುಂಪಿಗೆ ಸೇರಿದೆ. ಒಂದಾನೊಂದು ಕಾಲದಲ್ಲಿ, ಪರ್ಧನ್ ಗೊಂಡರು ಜಾನಪದ ಕಥೆಗಳು ಮತ್ತು ಧಾರ್ಮಿಕ ಮಹಾಕಾವ್ಯಗಳನ್ನು ಮೂರು ತಂತಿಯ ಬಾನ ನುಡಿಸುವ ಮೂಲಕ ಹಾಡುತ್ತಿದ್ದರು, ಈ ಕಾರಣಕ್ಕಾಗಿ ಅವರು ಚರಣ್ ಗಾಯಕರು ಮತ್ತು ಕವಿಗಳಾಗಿ ಸಮುದಾಯದ ಜನರಿಂದ ವಿಶೇಷ ಗೌರವವನ್ನು ಪಡೆದಿದ್ದಾರೆ. ಅವರು ತಲೆಮಾರುಗಳ ಕಾಲ ಎಲ್ಲಾ ಹಳೆಯ ಕಥೆಗಳನ್ನು ಜೀವಂತವಾಗಿಡುತ್ತಿದ್ದರು. ಆದರೆ ಈಗ ಸಮುದಾಯದ ಅನೇಕ ಯುವ ವಿಭಾಗಗಳು ಚಿತ್ರಕಲೆಯತ್ತ ಸಾಗಿವೆ. "ಈಗ ನಾವು ಕಾಗದ ಅಥವಾ ಕ್ಯಾನ್ವಾಸ್ ಮೇಲೆ ಅಕ್ರಿಲಿಕ್ ಬಣ್ಣಗಳ ಮೂಲಕ ಕಥೆಗಳನ್ನು ಹೇಳುತ್ತೇವೆ," ಎಂದು ಮಿಥಿಲೇಶ್ ಹೇಳುತ್ತಾರೆ.

ಅವರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರ-ಕಥೆಗಳನ್ನು ರಚಿಸುತ್ತಿದ್ದಾರೆ. ಮಿಥಿಲೇಶ್ ತನ್ನ ಸಹೋದರಿ ರಾಧಾ ತೇಕಮ್ ಅವರಿಂದ ಚಿತ್ರಕಲೆಯ ಉತ್ತಮ ತಂತ್ರಗಳನ್ನು ಕಲಿತ ನಂತರ ತನ್ನ 14ನೇ ವಯಸ್ಸಿನಲ್ಲಿ ಸ್ವತಃ ಚಿತ್ರಿಸಲು ಪ್ರಾರಂಭಿಸಿದರು. ರಾಧಾ ಕೂಡ ಚಿತ್ರಕಲಾವಿದರು. ಸಹೋದರರು ಮತ್ತು ಸಹೋದರಿಯರು, ಅವರು ತಮ್ಮ ತಾಯಿಯ ಅಜ್ಜನಿಂದ ಚಿತ್ರಿಸಲು ಕಲಿತರು - ಪ್ರಸಿದ್ಧ ಜಂಗರ್ ಸಿಂಗ್ ಶ್ಯಾಮ್ (1862-2001), ಅವರು 1980ರಲ್ಲಿ ಮೊದಲ ಗೊಂಡ್ ಗೋಡೆ ಚಿತ್ರಗಳನ್ನು ಕಾಗದ ಮತ್ತು ಕ್ಯಾನ್ವಾಸ್ ಮೇಲೆ ತಂದರು. ಅವರ ಕಲೆಯನ್ನು 'ಜಂಘರ್ ಕಲಮ್' ಎಂದು ಕರೆಯಲಾಗುತ್ತದೆ - ಈ ಕಲೆಯ ಸೃಷ್ಟಿಕರ್ತ ಜಂಘರ್, ಮತ್ತು ಅವರು ಬಳಸುವ ಪೆನ್ನನ್ನು ಒಟ್ಟುಗೂಡಿಸಿ ಈ ಹೆಸರಿಡಲಾಗಿದೆ. ಈಗ ಕಾಗದ ಮತ್ತು ಕ್ಯಾನ್ವಾಸ್ ಮೇಲೆ ಚಿತ್ರಿಸಲ್ಪಡುವ ಶೈಲಿಯು ಭಾರತ ಮತ್ತು ಪ್ರಪಂಚದಾದ್ಯಂತ ಗೊಂಡ್ ಶೈಲಿಯ ಕಲೆಯಾಗಿ ಪ್ರಸಿದ್ಧವಾಗಿದೆ. (ಅದರ ಬೆಳೆಯುತ್ತಿರುವ ಜನಪ್ರಿಯತೆಯು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ - ಹೆಚ್ಚು ತಲೆಕೆಡಿಸಿಕೊಳ್ಳದವರಿಗೆ, ಗೊಂಡ ಸಮುದಾಯಕ್ಕೆ ಸೇರದ ಹೊರಗಿನ ವರ್ಣಚಿತ್ರಗಳು ನಿಜವಾದ ಗೊಂಡ್ ವರ್ಣಚಿತ್ರಗಳ ಮಾರುಕಟ್ಟೆಯನ್ನು ಗೊಂಡ್ ವರ್ಣಚಿತ್ರಗಳೆಂದು ಮಾರಾಟ ಮಾಡುವ ಮೂಲಕ ನಾಶಪಡಿಸುತ್ತಿವೆ).

Top row: 'Sometimes, I paint from our folklore,' Mithlesh says. 'Other times, I am inspired by things and events from my daily life. I also paint from my imagination, even my dreams'. Bottom row: Roshni Shyam's paitings; she is Mithlesh's wife and also an artist
PHOTO • Mithlesh Kumar Shyam

ಮೇಲಿನ ಸಾಲು: 'ಕೆಲವೊಮ್ಮೆ, ನಾನು ನಮ್ಮ ಜಾನಪದದ ಪ್ರೇರಣೆಯಿಂದ ಚಿತ್ರಿಸುತ್ತೇನೆ' ಎಂದು ಮಿಥಿಲೇಶ್ ಹೇಳುತ್ತಾರೆ. ʼಉಳಿದಂತೆ, ನಾನು ನನ್ನ ದೈನಂದಿನ ಜೀವನದ ವಿಷಯಗಳು ಮತ್ತು ಘಟನೆಗಳಿಂದ ಪ್ರೇರೇಪಿತನಾಗಿದ್ದೇನೆ. ನಾನು ನನ್ನ ಕಲ್ಪನೆಯಿಂದ, ನನ್ನ ಕನಸುಗಳಿಂದ ಕೂಡ ಚಿತ್ರ ಬಿಡಿಸುತ್ತೇಬೆ'. ಕೆಳಗಿನ ಸಾಲು: ರೋಶನಿ ಶ್ಯಾಮ್ ಅವರ ಚಿತ್ರಗಳು; ಅವರು ಮಿಥಿಲೇಶ್ ಅವರ ಪತ್ನಿ ಮತ್ತು ಕಲಾವಿದೆ

"ನನ್ನ ಅಜ್ಜ ಪ್ರಸಿದ್ಧಿಗೆ ಬಂದು ಕೆಲಸದ ಹೊರೆ ಹೆಚ್ಚಾದಾಗ, ಅವರು ಹಳ್ಳಿಯಲ್ಲಿರುವ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಸಹಾಯ ಮಾಡಲು ತರಬೇತಿ ನೀಡಿದರು," ಎಂದು ಮಿಥಿಲೇಶ್ ವಿವರಿಸುತ್ತಾರೆ. ಅವರ ತರಬೇತಿ ಪಡೆದ ವಿದ್ಯಾರ್ಥಿಗಳು ಶೀಘ್ರದಲ್ಲೇ ತಮ್ಮದೇ ಆದ ವರ್ಣಚಿತ್ರಗಳ ರಚನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಮತ್ತು ಅವರು ಸಹ ಕಲೆಯ ಸೂಕ್ಷ್ಮಗಳನ್ನು ಇತರರಿಗೆ ಕಲಿಸಿದರು. 213 ಕುಟುಂಬಗಳ ಸುಮಾರು 80 ಪ್ರತಿಶತದಷ್ಟು ಪಠಣ್‌ಘರ್ ಕುಟುಂಬಗಳಲ್ಲಿ ಇಂದು ಕನಿಷ್ಠ ಒಬ್ಬ ಕಲಾವಿದ ಇದ್ದಾರೆ, ಅವರಲ್ಲಿ ಅರ್ಧದಷ್ಟು ಮಹಿಳೆಯರು ಇದ್ದಾರೆ ಎಂದು ಮಿಥಿಲೇಶ್ ಅಂದಾಜಿಸುತ್ತಾರೆ. ಅವರ ಪತ್ನಿ ರೋಶನಿ ಕೂಡ ಕಲಾವಿದೆ. "ಅವಳು ಆರಂಭದಲ್ಲಿ ನನಗೆ ಸಹಾಯ ಮಾಡುತ್ತಿದ್ದಳು, ಆದರೆ ಈಗ ಅವಳು ತನ್ನದೇ ಆದ ಚಿತ್ರಗಳನ್ನು ತಯಾರಿಸುತ್ತಾಳೆ," ಎಂದು ಅವರು ಹೇಳುತ್ತಾರೆ.

ಮಿಥಿಲೇಶ್ ಅವರ ಎ4 ಗಾತ್ರದ ಚಿತ್ರಗಳನ್ನು ಪೇಪರ್ ಅಥವಾ ಕ್ಯಾನ್ವಾಸ್ ಮೇಲೆ ಸರಾಸರಿ 2,000 ರೂ.ಗಳಿಗೆ ಮತ್ತು ಎ3 ಗಾತ್ರಗಳನ್ನು 4,000 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. "ಒಂದು ಕೆಲಸವನ್ನು ಪೂರ್ಣಗೊಳಿಸಲು ನನಗೆ ಎರಡರಿಂದ ಮೂರು ದಿನಗಳು ಬೇಕಾಗುತ್ತದೆ," ಎಂದು ಮಿಥಿಲೇಶ್ ಹೇಳುತ್ತಾರೆ. ಆದರೆ ಮಾರಾಟವು ಅನಿಯಮಿತವಾಗಿರುವುದರಿಂದ, ಅವರ ಆದಾಯವನ್ನು ಕುಶಲತೆಯಿಂದ ನಿರ್ವಹಿಸಲಾಗುತ್ತದೆ. ಅವರ ಹೆಚ್ಚಿನ ಚಿತ್ರಗಳನ್ನು ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿಯ ವಿವಿಧ ಹೋಟೆಲ್ ಗಳು ಅಥವಾ ರೆಸಾರ್ಟ್‌ಗಳಲ್ಲಿ ತಂಗುವ ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತದೆ. ಆ ಶಿಬಿರದಂತಹ ಕೆಲವು ಸ್ಥಳಗಳಲ್ಲಿ, ಪಠಾಣ್‌ ಘರ್ ಕಲಾವಿದರು ತಮ್ಮ ಕೃತಿಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಕೆಲವೊಮ್ಮೆ ಆಸಕ್ತ ಪ್ರವಾಸಿಗರು ಮತ್ತು ಖರೀದಿದಾರರು "ಕಲಾವಿದರ ಗ್ರಾಮ" ಎಂದು ಕರೆಯಲ್ಪಡುವ ಪಠಾಣ್ ಘರ್ ಗೆ ನೇರವಾಗಿ ಹೋಗುತ್ತಾರೆ.

ಮಿಥಿಲೇಶ್ ಮತ್ತು ಅವರಂತಹ ಕಲಾವಿದರು ರೆಸಾರ್ಟ್ ಇತ್ಯಾದಿಗಳಿಗೆ ಹೋದಾಗ ಅವರೊಂದಿಗೆ 150-200 ಚಿತ್ರಗಳನ್ನು ಕೊಂಡು ಹೋಗುತ್ತಾರೆ. ವಿವಿಧ ಪುರುಷ ಮತ್ತು ಮಹಿಳಾ ಕಲಾವಿದರ ಕೃತಿಗಳನ್ನು ಪ್ರವಾಸಿಗರು ಅಥವಾ ಸಂಭಾವ್ಯ ಖರೀದಿದಾರರಿಗೆ ಒಟ್ಟಿಗೆ ತೋರಿಸಲಾಗುತ್ತದೆ. ದಿನದ ಕೊನೆಯಲ್ಲಿ, ಮಧ್ಯಾಹ್ನ 3.00 ರ ಸುಮಾರಿಗೆ, ಮಿಥಿಲೇಶ್ ತನ್ನ ಹಳೆಯ ಮಾರುತಿ 800ಗೆ ಹಿಂದಿರುಗಿದರು. ಆದರೆ ಕನ್ಹಾ ಉದ್ಯಾನವನವನ್ನು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ ಪ್ರವಾಸಿಗರಿಗೆ ಮುಚ್ಚಲಾಗುತ್ತದೆಯಾದ್ದರಿಂದ, ಅದರ ಸುತ್ತಮುತ್ತಲಿನ ಹೋಟೆಲ್ಲುಗಳನ್ನು ಸಹ ಆ ಸಮಯದಲ್ಲಿ ಮುಚ್ಚಲಾಗುತ್ತದೆ.

The wall art or bitti chitra on Gond houses in Patangarh illustrates their deities, myths and legends
PHOTO • Mithlesh Kumar Shyam
The wall art or bitti chitra on Gond houses in Patangarh illustrates their deities, myths and legends
PHOTO • Mithlesh Kumar Shyam

ಪಠಾಣ್ ಗಢದ ಗೊಂಡ್ ಮನೆಗಳ ಮೇಲಿನ ಗೋಡೆ ಕಲೆ ಅಥವಾ ಬಿತ್ತಿ ಚಿತ್ರವು ಅವರ ದೇವತೆಗಳು, ಪುರಾಣಗಳು ಮತ್ತು ದಂತಕಥೆಗಳನ್ನು ವಿವರಿಸುತ್ತದೆ

ಬೇಡಿಕೆಯ ಕರೆಗಳು ಮಿಥಿಲೇಶ್ ಪಾಲಿಗೆ ಆದಾಯದ ಮತ್ತೊಂದು ಮೂಲವಾಗಿದೆ - ಅವರು ಕೆಲವೊಮ್ಮೆ ಗೋಡೆ ಚಿತ್ರಗಳು ಅಥವಾ ಭಿತ್ತಿಚಿತ್ರಗಳನ್ನು ಬೇರೊಬ್ಬರ ಮನೆಯಲ್ಲಿ ಚಿತ್ರಿಸುತ್ತಾರೆ. ಅವರು ಒಮ್ಮೆ ಅಹಮದಾಬಾದಿನ ತೋಟದ ಮನೆಯ ಗೋಡೆಗಳನ್ನು ಇಬ್ಬರು ಸಹ ಕಲಾವಿದರೊಂದಿಗೆ ಅಲಂಕರಿಸುವ ಕೆಲಸ ಮಾಡಿದರು. ಅವರೆಲ್ಲರೂ ಒಂದು ತಿಂಗಳ ಕಾಲ ಈ ಕೆಲಸವನ್ನು ಮಾಡುವ ಮೂಲಕ ಒಟ್ಟಿಗೆ 2.5 ಲಕ್ಷ ರೂ.ಗಳನ್ನು ಗಳಿಸಿದರು. ಈ ಕೆಲಸಗಳು ಮಿಥಿಲೇಶ್ ಪಾಲಿಗೆ ಹೆಚ್ಚು ಅಗತ್ಯವಾದ ಹೆಚ್ಚುವರಿ ಆದಾಯವನ್ನು ಒದಗಿಸುತ್ತವೆಯಾದರೂ, ಅಂತಹ ಕೆಲಸವು ಹೆಚ್ಚು ಸಿಗುವುದಿಲ್ಲ.

ಭೋಪಾಲ್ ಮೂಲದ ಆದಿವಾಸಿ ಕೋ-ಆಪರೇಟಿವ್ ಮಾರ್ಕೆಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಚಂಡೀಗಢದ ಕಲಾಗ್ರಾಮದಂತಹ ಕರಕುಶಲ ವಸ್ತುಗಳ ಅಭಿವೃದ್ಧಿಗಾಗಿ ಇರುವ ಸಂಸ್ಥೆಗಳು ಅವರ ಛಾಯಾಚಿತ್ರವನ್ನು ಕೇಳುತ್ತವೆ. ನವದೆಹಲಿಯ ಸರ್ಕಾರಿ ಸ್ವಾಮ್ಯದ ಕರು-ಶಿಪ್ಲೆ ವಸ್ತುಸಂಗ್ರಹಾಲಯವು ಚಿತ್ರಗಳನ್ನು ಮಾರಾಟ ಮಾಡುವ ಅವಕಾಶವನ್ನು ಹೊಂದಿದೆ. ಆದರೆ ಅದು ನಿಯಮಿತವಾಗಿ ನಡೆಯುವುದಿಲ್ಲ ಮತ್ತು ಇಲ್ಲಿ ಮಾರಾಟದ ಖಾತರಿಯಿಲ್ಲ ಎಂದು ಮಿಥಿಲೇಶ್ ಹೇಳುತ್ತಾರೆ, ಅವರು 2013ರಲ್ಲಿ ಒಮ್ಮೆ ಮಾತ್ರ ಕರಕುಶಲ ವಸ್ತುಸಂಗ್ರಹಾಲಯಕ್ಕೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಆಹ್ವಾನಿಸಲ್ಪಟ್ಟರು. "ನಾನು ಇಡೀ ತಿಂಗಳು ವಸ್ತುಪ್ರದರ್ಶನದಲ್ಲಿ ಕುಳಿತು ಕೇವಲ ಒಂದು ಚಿತ್ರವನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. 2018ರಲ್ಲಿ ಅವರ ಅತಿದೊಡ್ಡ ಚಿತ್ರ 5*4.5 ಅಡಿ - ದೆಹಲಿಯ ದುಬಾರಿ ಹೋಟೆಲ್ಲಿನಲ್ಲಿ ಕಲಾಸಕ್ತ ವ್ಯಕ್ತಿಯೊಬ್ಬರು ಕೊಂಡರು. ಆ ಕ್ಯಾನ್ವಾಸ್ ಚಿತ್ರವನ್ನು ಪೂರ್ಣಗೊಳಿಸಲು ಅವರಿಗೆ ಒಂದು ತಿಂಗಳು ಬೇಕಾಗಿತ್ತು.

ಕೆಲವು ತಿಂಗಳುಗಳಲ್ಲಿ, ಮಿಥಿಲೇಶ್ ತಮ್ಮ ಚಿತ್ರಗಳಿಂದ 15,000-20,000 ರೂ.ಗಳನ್ನು ಗಳಿಸುತ್ತಾರೆ. ಒಂದು ತಿಂಗಳಲ್ಲಿ ಅದಕ್ಕಿಂತ ಎರಡು ಪಟ್ಟು ಸಂಪಾದಿಸಿದರೆ, ಅದು ಅನುಕೂಲಕರ ತಿಂಗಳು. ಅವರ ಆದಾಯದ ಹೆಚ್ಚಿನ ಭಾಗವನ್ನು ಮನೆಯ ಖರ್ಚುಗಳಿಗೆ ಮತ್ತು ಪೆನ್ನುಗಳು, ಶಾಯಿ, ಅಕ್ರಿಲಿಕ್ ಮತ್ತು ಫ್ಯಾಬ್ರಿಕ್ ಪೇಂಟ್ ಗಳು, ಹತ್ತಿ, ಕಾಗದ ಮತ್ತು ಕ್ಯಾನ್ವಾಸ್ ಖರೀದಿಸಲು ಖರ್ಚು ಮಾಡಲಾಗುತ್ತದೆ.

An intricate pattern of dots, dashes and curves fill the larger shapes in a Gond painting.'It takes me two to three days to complete each artwork', Mithlesh says
PHOTO • Mithlesh Kumar Shyam
An intricate pattern of dots, dashes and curves fill the larger shapes in a Gond painting.'It takes me two to three days to complete each artwork', Mithlesh says
PHOTO • Mithlesh Kumar Shyam

ಚುಕ್ಕೆಗಳು, ಗೆರೆಗಳು ಮತ್ತು ವಕ್ರರೇಖೆಗಳ ಸಂಕೀರ್ಣ ಮಾದರಿಯು ಗೊಂಡ್ ವರ್ಣಚಿತ್ರದಲ್ಲಿನ ದೊಡ್ಡ ಆಕಾರಗಳನ್ನು ತುಂಬುತ್ತದೆ. 'ಪ್ರತಿ ಕಲಾಕೃತಿಯನ್ನು ಪೂರ್ಣಗೊಳಿಸಲು ನನಗೆ ಎರಡರಿಂದ ಮೂರು ದಿನಗಳು ಬೇಕಾಗುತ್ತದೆ' ಎಂದು ಮಿಥಿಲೇಶ್ ಹೇಳುತ್ತಾರೆ

ಆದರೆ ಪಠಾಣಗಢದ ಮಿಥಿಲೇಶ್ ಮತ್ತು ಇತರ ಕಲಾವಿದರಿಗೆ ಚಿತ್ರಕಲೆ ಉಪಕರಣಗಳನ್ನು ಖರೀದಿಸುವುದು ತುಂಬಾ ಕಷ್ಟ. ಪೂರ್ವ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಕರಂಜಿಯಾ ಬ್ಲಾಕ್ನಲ್ಲಿರುವ ಪಠಾಣಗಢ ಗ್ರಾಮದಿಂದ (2011ರ ಜನಗಣತಿಯಲ್ಲಿ ಪಠಾಣಗಢ ಮಾಲ್ ಎಂದು ಗುರುತಿಸಲಾಗಿದೆ) ಭೋಪಾಲ್‌ಗೆ ಹೋಗುವುದು ಎಂದರೆ 500 ಕಿಲೋಮೀಟರ್ ದೂರವನ್ನು ಕ್ರಮಿಸುವುದು ಎಂದರ್ಥ - ಜಬಲ್ಪುರಕ್ಕೆ ಬಸ್ನಲ್ಲಿ 4-5 ಗಂಟೆಗಳ ಪ್ರಯಾಣ ಮತ್ತು ಭೋಪಾಲದಿಂದ 7-8 ಗಂಟೆಗಳ ಪ್ರಯಾಣ. ಈಗ ತಿಂಗಳುಗಳಿಂದ, ಮಿಥಿಲೇಶ್ ಹೇಳುತ್ತಾರೆ, ಗ್ರಾಮದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಜಬಲ್ಪುರದಲ್ಲಿ ಪೇಂಟಿಂಗ್ ಉಪಕರಣಗಳು ಲಭ್ಯವಿವೆ.

ರಸ್ತೆಗಳು ಮತ್ತು ಸಾರಿಗೆಯ ಕಳಪೆ ಗುಣಮಟ್ಟದಿಂದಾಗಿ ಪಠಾಣಗಢದ ಕಲಾವಿದರು ನಗರಕ್ಕೆ ಹೋಗಿ ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ಕಷ್ಟವಾಗುವುದರಿಂದ ಅನೇಕ ಕಲಾವಿದರು ಭೋಪಾಲಕ್ಕೆ ಸ್ಥಳಾಂತರಗೊಂಡಿದ್ದಾರೆ. ಪಠಾಣಗಢದಲ್ಲಿ ಉಳಿದುಕೊಂಡಿರುವವರು ಚಿತ್ರಕಲೆಯೊಂದಿಗೆ ಕೃಷಿ ಅಥವಾ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಕೆಲವರು ಹೆಚ್ಚುವರಿ ಆದಾಯವನ್ನು ಗಳಿಸಲು ಸಣ್ಣ ವ್ಯವಹಾರಗಳನ್ನು ಮಾಡುತ್ತಾರೆ. ಮಿಥಿಲೇಶ್ ಓರ್ವ ಪೂರ್ಣಕಾಲಿಕ ಕಲಾವಿದ. ಅವರ ಕುಟುಂಬವು ತಮ್ಮ 4 ಎಕರೆ ಭೂಮಿಯನ್ನು ಭತ್ತ, ಸೋಯಾಬೀನ್ ಮತ್ತು ಇತರ ಬೆಳೆಗಳನ್ನು ಬೆಳೆಯಲು ಒಬ್ಬ ರೈತನಿಗೆ ಗುತ್ತಿಗೆ ನೀಡಿದೆ - ಅವರು ಪಡೆಯುವ ಬೆಳೆಯ ಅರ್ಧದಷ್ಟು ಇವರಿಗೆ ದೊರೆಯುತ್ತದೆ.

ಕೆಲವು ವರ್ಷಗಳ ಹಿಂದೆ, ಮಿಥಿಲೇಶ್ ತನ್ನ ತಾಯಿಯು ಸರ್ಕಾರಿ ಯೋಜನೆಯಿಂದ ಪಡೆದ ಪಕ್ಕಾ ಮನೆಗೆ ಸ್ಥಳಾಂತರಗೊಂಡರು. ಮಿಥಿಲೇಶ್ ತನ್ನ ಪತ್ನಿ ರೋಶ್ನಿ, ನಾಲ್ಕು ವರ್ಷದ ಮಗಳು, ತಾಯಿ ಮತ್ತು ಅಜ್ಜನೊಂದಿಗೆ ವಾಸಿಸುತ್ತಾರೆ. ಕನಿಷ್ಠ 60 ವರ್ಷಗಳಷ್ಟು ಹಳೆಯದಾದ ಬಿತ್ತಿ ವರ್ಣಚಿತ್ರದಲ್ಲಿ ಅಲಂಕೃತವಾದ ಅವರ ಮೂಲ ಮಣ್ಣಿನ ಮನೆ ಇನ್ನೂ ಹಾಗೆಯೇ ಇದೆ. "ಒಂದು ದಿನ ನಾನು ಅದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ."

ಅನುವಾದ: ಶಂಕರ. ಎನ್. ಕೆಂಚನೂರು

Anne Pinto-Rodrigues

Anne Pinto-Rodrigues is a Netherlands-based writer and photographer. Her work can be viewed at www.annepintorodrigues.com

Other stories by Anne Pinto-Rodrigues
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru